ಕಡಿರುದ್ಯಾವರದಲ್ಲಿ ಕಾಡಾನೆ

0

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಸಿರಿಬೈಲು ಸಮೀಪ ಮುತ್ತಲಕೋಡಿ ಎಂಬಲ್ಲಿ ಮೇ. 11ರಂದು ಸಂಜೆ 6 ಗಂಟೆ ಹೊತ್ತಿಗೆ ಕಾಡಾನೆ ಕಂಡು ಬಂದಿದೆ. ಇಲ್ಲಿ ಹಲವು ಮನೆಗಳಿದ್ದು ಮನೆಗಳ ಸಮೀಪದಲ್ಲೇ ಕಾಡಾನೆ ಕಂಡು ಬಂದಿದ್ದು ಬಳಿಕ ಸಮೀಪದ ಅರಣ್ಯದತ್ತ ಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಳೆದ ಸುಮಾರು ಒಂದು ತಿಂಗಳಿನಿಂದ ಈ ಪ್ರದೇಶದಲ್ಲಿ ಕಾಡಾನೆಗಳ ಕಾಟ ಇರಲಿಲ್ಲ. ಆದರೆ ಮೇ.11ರಂದು ಸಂಜೆ ಹೊತ್ತಿಗೆ ಕಾಡಾನೆ ಜನ ವಾಸ್ತವ್ಯ ಇರುವ ಪ್ರದೇಶದ ಹತ್ತಿರವೇ ಸುಳಿದಾಡಿದೆ.

LEAVE A REPLY

Please enter your comment!
Please enter your name here