


ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಕಳೆದ ಎರಡು ವರ್ಷಗಳಿಂದ ಯೂಟ್ಯೂಬ್ ಚಾನೆಲ್ ಮೂಲಕ ಕಾರ್ಯನಿರ್ವಹಿಸುತ್ತಿದ್ದ “ಧ್ವನಿ ನ್ಯೂಸ್”ನ ವಿಸ್ತರಿಸಿದ ಭಾಗವಾಗಿ ಇಂದು www.dhwaninews.com ವೆಬ್ ಸೈಟ್ ಅನ್ನು ಲೋಕಾರ್ಪಣೆಗೊಳಿಸಿತು.

ಉಜಿರೆ ಸಮೀಪದ ಕಾರಣಿಕ ಕ್ಷೇತ್ರವಾಗಿರುವ ಬೆಳಾಲು ಶ್ರೀ ಆರಿಕೋಡಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಧರ್ಮದರ್ಶಿಗಳಾದ ಶ್ರೀ ಹರೀಶ್ ಆರಿಕೋಡಿ ಅವರು ವೆಬ್ ಸೈಟ್ ಅನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಲಾಯಿತು.



ಇನ್ನು, ಕನ್ಯಾಡಿಯ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯಾಶಿರ್ವಾದವನ್ನು ಪಡೆಯಲಾಯಿತು.

ಶುಭ ಹಾರೈಸಿದ ಸ್ವಾಮೀಜಿಗಳು, “ಮಾದ್ಯಮ ಸಂಸ್ಥೆಗಳು ಸಮಾಜವನ್ನು ಒಂದುಗೂಡಿಸುವ ಕಾರ್ಯಗಳನ್ನು ಮಾಡಬೇಕಿದೆ. ಸಮಾಜದ ಏಳಿಗೆಗಾಗಿ ಇಂದು ಧ್ವನಿ ನ್ಯೂಸ್ ವಿಸ್ತೃತ ಭಾಗವಾಗಿ ವೆಬ್ ಸೈಟ್ ಅನ್ನು ಲೋಕಾರ್ಪಣೆಗೊಳಿಸಿದ್ದು ಸಂತಸದ ವಿಚಾರ”ವೆಂದರು. ಈ ಸಂದರ್ಭದಲ್ಲಿ ಧ್ವನಿ ನ್ಯೂಸ್ ಸಂಪಾದಕರಾದ ಸುದೀಪ್ ಸಾಲ್ಯಾನ್ ಸೇರಿದಂತೆ, ಸಂಸ್ಥೆಯ ಸಿಬ್ಬಂದಿ ವರ್ಗದವರಾದ ಸಂತೋಷ್ ಬೇಂಕ್ಯ, ಮನೀಷ್, ಕಿರಣ್, ಸುದರ್ಶನ್, ಲೋಹಿತ್, ಯೋಗೀಶ್ ಉಪಸ್ಥಿತರಿದ್ದರು.







