
ಉಜಿರೆ: ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಉಗ್ರರು ಅಮಾಯಕರನ್ನು ಹತ್ಯೆ ಮಾಡಿದ ನಂತರ ಆಕ್ರೋಶಗೊಂಡಿದ್ದ ಭಾರತೀಯರು ಸೇನೆಯ ಆಪರೇಷನ್ ಸಿಂಧೂರ್‌ನಿಂದ ಸಂತುಷರಾಗಿದ್ದಾರೆ. ಏಪ್ರಿಲ್ 6ರ ಮಧ್ಯ ರಾತ್ರಿ 1.44ರ ಹೊತ್ತಿಗೆ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿರುವ ಭಾರತೀಯ ಸೇನೆಯ ಕಾರ್ಯಕ್ಕೆ ನಾಗರಿಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಉಜಿರೆಯಲ್ಲೂ ಕೂಡ ಸಂಭ್ರಮಾಚರಣೆ ಮುಗಿಲುಮುಟ್ಟಿತ್ತು.
ಪಟಾಕಿ ಸಿಡಿಸಿ ಸಂಭ್ರಮಾಚರಣೆ: ಉಜಿರೆಯ ಸರ್ಕಲ್‌ನಲ್ಲಿ ಸೇರಿದ ಸಾರ್ವಜನಿಕರು ಭಾರತದ ದ್ವಜ ಹಿಡಿದು ಸಂಭ್ರಮಿಸಿದರು. ಭೋಲೋ ಭಾರತ್ ಮಾತಾಕಿ ಜೈಕಾರ ಹಾಕುತ್ತಾ, ಪ್ರಧಾನಿ ಮೋದಿಯವರ ನಿರ್ಧಾರವನ್ನು ಸ್ವಾಗತಿಸುತ್ತಾ, ಸೇನೆಯ ಮಹಾ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಉಜಿರೆಯ ಸರ್ಕಲ್‌ನಲ್ಲೇ ಕದಿನ ಇಟ್ಟು ಸಿಡಿಸಿ ಸಂಭ್ರಮಿಸಿದರು. ಸಾರ್ವಜನಿಕರಿಗೆ ಸಿಹಿ ಹಂಚಿ ಖುಷಿಪಟ್ಟರು.
ಈ ವೇಳೆ ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ವರ್ತಕರ ಸಂಘದ ಅಧ್ಯಕ್ಷ ಅರವಿಂದ್ ಕಾರಂತ್, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾಕಿರಣ್ ಕಾರಂತ್, ರಾಮಚಂದ್ರ ಶೆಟ್ಟಿ, ಭರತ್ ಕುಮಾರ್,ಪದ್ಮನಾಭ ಶೆಟ್ಟಿಗಾರ್, ಲಕ್ಷ್ಮಣ ಸಫಲ್ಯ, ಮುರುಳಿಧರ ಮಾಚಾರ್, ಹರೀಶ್, ರವಿಚಕ್ಕಿತ್ತಾಯ, ಪಂಚಾಯತ್ ಸದಸ್ಯರಾದ ಗುರುಪ್ರಸಾದ್, ಸಂಧ್ಯಾ, ಸವಿತಾ ಹಾಗೂ ರವೀಂದ್ರ ಶೆಟ್ಟಿ, ಮುರುಳಿ ಮಾಚಾರ್, ಗಣೇಶ್ ಇಂಡಿಯನ್ ಬೇಕರಿ, ಅಜೇಯ್ ಶೆಟ್ಟಿ, ಮಧುಕರ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು.