ಮಾಲಾಡಿ: ಮೇ.6ರಂದು ಗ್ರಾಮ ಪಂಚಾಯತ್ ಮಾಲಾಡಿ ಹಾಗೂ ಅರಿವು ಕೇಂದ್ರದ ಸಹಭಾಗಿತ್ವದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು. ಒಂದು ವಾರದ ಕಾಲ ನಡೆಯುವ ಈ ಶಿಬಿರದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಕುಮಾರ್ ಹಾಗೂ ಮಕ್ಕಳಿಂದ ದೀಪ ಬೆಳಗಿಸುವುದರ ಮೂಲಕ ನೆರವೇರಿಸಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಬೇಸಿಗೆ ಶಿಬಿರದ ಬಗ್ಗೆ ಮಕ್ಕಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಪುನೀತ್ ಕುಮಾರ್, ಉಪಾಧ್ಯಕ್ಷೆ ಸೆಲೆಸ್ಟಿನ್ ಡಿಸೋಜ, ಸರ್ವ ಸದಸ್ಯರು, ಶಾಲಾ ಶಿಕ್ಷಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು, ಕಾರ್ಯದರ್ಶಿಯವರು ಹಾಗೂ ಸಿಬ್ಬಂದಿ ವರ್ಗ ಸಮುದಾಯ ಆರೋಗ್ಯ ಅಧಿಕಾರಿಯವರು ಉಪಸ್ಥಿತರಿದ್ದು ಸಹಕರಿಸಿದರು.
ಗ್ರಂಥಾಲಯ ಮೇಲ್ವಿಚಾರಕಿ ಜ್ಯೋತಿ ಎಸ್. ಇವರು ಸ್ವಾಗತಿಸಿದರು. ನಂತರ ಮಕ್ಕಳಿಗೆ ವಿವಿಧ ಆಟೋಟ ಸ್ಫರ್ಧೆಗಳನ್ನು, ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು. ಈ ಶಿಬಿರವು ಮೇ.12ರವರೆಗೆ ಜರಗಲಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ. ರಾಜಶೇಖರ ರೈ ಯವರು ಧನ್ಯವಾದವಿತ್ತರು.