ಬೆಳ್ತಂಗಡಿ: ಅನುಗ್ರಹ ಎಜುಕೇಶನ್ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ಸಂಸ್ಥೆಯು ಕಳೆದ 15 ವರ್ಷಗಳಿಂದ ಶೈಕ್ಷಣಿಕವಾಗಿ ಮತ್ತು ಸೇವಾ ಕ್ಷೇತ್ರಗಳಲ್ಲಿ ಸೇವೆಗಳನ್ನು ಸಲ್ಲಿಸುತ್ತಿದ್ದು, ಅದರ ಭಾಗವಾಗಿ ತಾಂತ್ರಿಕ ಮತ್ತು ವೃತ್ತಿಪರ ತರಬೇತಿಗಳ ಶಿಕ್ಷಣ ಸಂಸ್ಥೆಯಾಗಿ ಕಳೆದ 12 ವರ್ಷಗಳಿಂದ ಯಶಸ್ವಿಯಾಗಿ ಶಿಕ್ಷಣ ನೀಡುತ್ತಾ ಬಂದಿದೆ. ಅಲ್ಲದೆ ಮಂಗಳೂರಿನ ಮುಡಿಪು ಎಂಬಲ್ಲಿ ಸಂಸ್ಥೆಯ ಇನ್ನೊಂದು ಶಾಖೆಯನ್ನು ತೆರೆದು ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಅನುಗ್ರಹ ಟ್ರೈನಿಂಗ್ ಕಾಲೇಜು ಹಾಗೂ ಕಳೆದ 20 ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಹಲವಾರು ಯುನಿವರ್ಸಿಟಿಗಳ ಮಾನ್ಯತೆ ಇರುವ ಹಾಗೂ ಕೇಂದ್ರ ಸರಕಾರದ ಎನ್.ಎಸ್.ಡಿ.ಸಿ ಯಿಂದ ಅಂಗೀಕೃತಗೊಂಡ ಮಾತ್ರವಲ್ಲ ದೇಶದಾದ್ಯಂತ ಹಲವಾರು ಶಾಖೆಗಳನ್ನು ಒಳಗೊಂಡ ಸಂಸ್ಥೆಯಾಗಿದೆ. ಇದೀಗ ಬೆಳ್ತಂಗಡಿಯಲ್ಲಿ ಪ್ರಥಮ ಬಾರಿಗೆ ಎರಡು ಸಂಸ್ಥೆಗಳ ಜಂಟಿ ಸಹಯೋಗದೊಂದಿಗೆ ಬೆಳ್ತಂಗಡಿಯ ಸಂತೆಕಟ್ಟೆಯ ಶ್ರೀರಾಮ ಕಾಂಪ್ಲೆಕ್ಸ್ ನಲ್ಲಿರುವ ಅನುಗ್ರಹ ಟ್ರೈನಿಂಗ್ ಕಾಲೇಜು ಮತ್ತು ಮಂಗಳೂರಿನ ಪ್ರತಿಷ್ಠಿತ ಸಂಸ್ಥೆಯಾದ ಮೈಫ್ಸ್ ಮಿನರ್ವಾ ಕಾಲೇಜು ಮೊದಲ ಬಾರಿಗೆ ಜಂಟಿ ಸಹಭಾಗಿತ್ವದಲ್ಲಿ ಹೊಸ ಕಾಲೇಜು ಕ್ಯಾಂಪಸ್ ಸ್ಥಾಪಿಸಿದ್ದು, ಎಲ್ಲಾ ರೀತಿಯ ಆಧುನಿಕ ಅಗತ್ಯತೆ ಇರುವ, ಉದ್ಯೋಗಾವಕಾಶಕ್ಕೆ ಬೇಡಿಕೆ ಇರುವ ಪ್ರಮುಖ ಕೋರ್ಸುಗಳನ್ನು ಬೆಳ್ತಂಗಡಿಯಲ್ಲಿ ಪರಿಚಯಿಸಿ, ವಿದ್ಯಾರ್ಥಿಗಳನ್ನು ಉದ್ಯೋಗಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಮುನ್ನಡೆದಿದೆ. ಈ ಸಂಸ್ಥೆಯ ಅಧಿಕೃತ ಕಚೇರಿಯನ್ನು ಮೇ. 5ರಂದು ಅದ್ಧೂರಿಯಾಗಿ ಉದ್ಘಾಟಿಸಲಾಯಿತು.

ಸಂಸ್ಥೆಯ ಮುಖ್ಯ ಕಚೇರಿಯನ್ನು ಧಾರ್ಮಿಕ ಮುಖಂಡ, ವಿದ್ವಾಂಸರಾಗಿರುವ ಸಬರಬೈಲ್ ತಂಗಲ್ ಎಂದು ಪ್ರಖ್ಯಾತಿ ಪಡೆದ ಸೈಯದ್ ಜಮಲುಲ್ಲೈಲ್ ತಂಗಳ್ ಇವರು ನೆರವೇರಿಸಿದರು. ಉದ್ಘಾಟನಾ ಸಮಾರಂಭವನ್ನು ಬೆಸ್ಟ್ ಫೌಂಡೇಶನ್ ಸಂಸ್ಥಾಪಕರೂ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ರಕ್ಷಿತ್ ಶಿವರಾಮ್ ಅವರು ನೆರವೇರಿಸಿದರು.
ವಿದ್ಯಾರ್ಥಿಗಳ ಬದುಕು ರೂಪಿಸುತ್ತಿರುವ ಶಿಕ್ಷಣ ಸೇವೆ – ತಲ್ಹತ್ ಎಂ.ಜಿ ಸವಣಾಲು: “ಅನುಗ್ರಹ ಟ್ರೈನಿಂಗ್ ಕಾಲೇಜು ಆರಂಭದಿಂದಲೂ ಪ್ರಾದೇಶಿಕ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ, ಉದ್ಯೋಗಕ್ಕೆ ತಯಾರಿ, ಮತ್ತು ವ್ಯಕ್ತಿತ್ವ ವಿಕಾಸದಲ್ಲಿ ನೆರವಾಗುತ್ತಿದೆ. ಈ ಸಹಭಾಗಿತ್ವ ನಮ್ಮ ಸೇವೆಗೆ ಹೊಸ ಆಯಾಮ ನೀಡುತ್ತದೆ.”
ಅನುಗ್ರಹ ಟ್ರೈನಿಂಗ್ ಕಾಲೇಜು ಇದರ ನಿರ್ದೇಶಕ ಮುಹಮ್ಮದ್ ತೌಸೀಪ್ ಇವರು ಸಂಸ್ಥೆಯ ವೆಬ್ಸೈಟ್ ಬಗ್ಗೆ ಸಂಪೂರ್ಣ ವಿವರಣೆಯನ್ನು ಮತ್ತು ಅದರ ಪ್ರಯೋಜನಗಳನ್ನು ನೀಡಿ ಪ್ರಸಕ್ತ ಸನ್ನಿವೇಶದಲ್ಲಿ ವೃತ್ತಿಪರ ತರಬೇತಿಗಳ ಅಗತ್ಯತೆಯನ್ನು ಸಭಿಕರಿಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರ ತಂದೆ ಸುಲೈಮಾನ್ ಕಕ್ಕಿಂಜೆ, ಕರೀಮ್ ಗೇರುಕಟ್ಟೆ, ಶ್ರೀರಾಮ ಕಾಂಪ್ಲೆಕ್ಸ್ ಕಟ್ಟಡದ ಮಾಲೀಕ ಮುಕೇಶ್ ಆರ್. ನಾಯಕ್, ಅನುಗ್ರಹ ಸ್ಕೂಲ್ ಬುಕ್ ಕಂಪನಿ ಬೆಳ್ತಂಗಡಿ ಇದರ ಮಾಲಕ ಮಹಮ್ಮದ್ ಅಶ್ರಫ್ ಫೈಜಿ, ಹಾರೀಶ್ ಮುರ, ಖಾಲಿದ್ ಗಂಡಿ, ರಾಜ ಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ., ಎ.ಆರ್. ಗ್ರೂಪ್ ಮಾಲಕ ಅಬ್ದುಲ್ ಹಮೀದ್, ಮೊಹಮ್ಮದ್ ನಾಸಿಕ್ ಮಲೆಬೆಟ್ಟು, ಮಹಮ್ಮದ್ ಆಶೀರ್ ಸವಣಾಲು ಪಾಲ್ಗೊಂಡು ಸಂಸ್ಥೆಗೆ ಶುಭ ಹಾರೈಸಿದರು.
ಅಬ್ದುಲ್ ಖಾದರ್, ಕಿಲ್ರ್ ಜುಮಾ ಮಸೀದಿ ಅಧ್ಯಕ್ಷ ಹಾಗೂ ಬೆಳ್ತಂಗಡಿ ತಾಲೂಕು ಮುಸ್ಲಿಂ ಒಕ್ಕೂಟ ಇದರ ಅಧ್ಯಕ್ಷ ನಝೀರ್ ಬೆಳ್ತಂಗಡಿ, ಕೆಪಿಸಿಸಿ ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷ ಹನೀಫ್ ಉಜಿರೆ, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯ ಹಿರಿಯ ಅಧಿಕಾರಿ ಬಿ ಸೇಕುನ್ನಿ ಬೆಳ್ತಂಗಡಿ, ತಕ್ವ ಜುಮಾ ಮಸೀದಿ ಬಳಂಜದ ಝಮೀರ್ ಸಹದಿ, ಮುಸ್ಲಿಂ ಯುವಜನ ಪರಿಷತ್ ಇದರ ತಾಲೂಕು ಅಧ್ಯಕ್ಷ ಹಾಗೂ ಯುವ ವಕೀಲ ನವಾಝ್ ಕಕ್ಕಿಂಜೆ, ಮೈಫ್ಸ್ ಮಿನರ್ವ ಕಾಲೇಜು ಮಂಗಳೂರು ಇದರ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಮನೋಜ್, ಶ್ರೀರಾಮ ಕಾಂಪ್ಲೆಕ್ಸ್ ಇದರ ವಿವಿಧ ಬ್ಯಾಂಕ್, ಅಂಗಡಿ, ಮತ್ತು ವಿವಿಧ ಸಂಸ್ಥೆಗಳ ಮ್ಯಾನೇಜರ್ ಸಿಬ್ಬಂದಿಗಳು ಮಾಲಕರು ಅದೇ ರೀತಿ ಈಗಾಗಲೇ ದಾಖಲಾತಿಯನ್ನು ಪಡೆದ ವಿದ್ಯಾರ್ಥಿಗಳು ಮತ್ತು ಪೋಷಕರು ಮಾತ್ರವಲ್ಲ ಸಂಸ್ಥೆಯ ಆಡಳಿತ ಮಂಡಳಿಯ ಎಲ್ಲಾ ಮುಖ್ಯಸ್ಥರು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಸ್ಥೆಗೆ ಶುಭ ಹಾರೈಸಿದರು ಹಾಗೂ ಉಪಸ್ಥಿತರಿದ್ದರು.
ಸಂಸ್ಥೆಯ ಅಧಿಕೃತ ವೆಬ್ ಸೈಟ್ www.anugraheducationtrust.com ಅನ್ನು ದೇಶ ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉದ್ಯಮವನ್ನು ಪ್ರಾರಂಭಿಸಿ ಯಶಸ್ವಿಯನ್ನು ಕಂಡ ಓರ್ವ ಉದ್ಯಮಿ ಐ ಜಿ ಸಂಶುದ್ದೀನ್ ತುಂಬೆ (ಸುನ್ನತ್ ಕೆರೆ) ಇವರು ಅಧಿಕೃತವಾಗಿ ಚಾಲನೆಯನ್ನು ನೀಡಿ ಸಂಸ್ಥೆಗೆ ಶುಭ ಹಾರೈಸಿದರು.
ಸಂಸ್ಥೆಯ ಎಲ್ಲಾ ರೀತಿಯ ಮಾರ್ಗದರ್ಶಕರಾದ ಜಿ. ಇಸುಬು, ಅಬ್ದುಲ್ ಹಮೀದ್ ಮುಸ್ಲಿಯಾರ್ ಸವಣಾಲು ಹಾಗೂ ಸವಣಾಲು ಬದ್ರಿಯಾ ಜುಮಾ ಮಸೀದಿಯ ಖತೀಬ್ ಉಸ್ತಾದ್ ರಿಯಾಝ್ ಸಹದಿ, ಕನ್ನಡಿ ಕಟ್ಟೆ ಜುಮಾ ಮಸೀದಿಯ ಖತೀಬ್ ಉಸ್ತಾದ್ ಅಶ್ರಫ್ ಫೈಝಿ, ಹಾಗೂ ನೌಶಾದ್ ಅಝ್ಹರಿ ಕಕ್ಕಿಂಜೆ, ಉಸ್ಮಾನ್ ಉಸ್ತಾದ್ ಕನ್ನಡಿಕಟ್ಟೆ ಇದ್ದು ಪ್ರಾರ್ಥನೆಯಲ್ಲಿ ಪಾಲ್ಗೊಂಡರು.