
ಕೊಕ್ಕಡ: ಸೈಂಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆಯ ಎಸ್.ಎಸ್. ಎಲ್.ಸಿ ವಿದ್ಯಾರ್ಥಿಗಳು 100% ಫಲಿತಾಂಶದೊಂದಿಗೆ ಉತ್ತೀಣ೯ರಾಗಿದ್ದಾರೆ. ಪರೀಕ್ಷೆ ಬರೆದ 37 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 14 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಿದ್ಯಾರ್ಥಿಗಳು ಸತತ 7ನೇ ಬಾರಿಗೆ 100% ಫಲಿತಾಂಶ ನೀಡಿ ಶಾಲೆಗೆ ಹೆಮ್ಮೆಯ ಕೊಡುಗೆ ನೀಡಿದ್ದಾರೆ. ದಿಶಾ ಕೆ. ಎಸ್ 610 ಪ್ರಥಮ ಸ್ಥಾನ, ಶೋಭಲತಾ 605 ದ್ವಿತೀಯ ಸ್ಥಾನ ಹಾಗೂ ಪ್ರತೀಕ್ ಎ. 604 ತೃತೀಯ ಸ್ಥಾನ ಪಡೆದಿದ್ದಾರೆ.