ಬೆಳ್ತಂಗಡಿ ಶೃಂಗಾ‌ರ್ ಜ್ಯುವೆಲ್ಲರ್‌ನಲ್ಲಿ ಅಕ್ಷಯ ತೃತೀಯ ಸೇಲ್

0

ಬೆಳ್ತಂಗಡಿ: ಇಲ್ಲಿನ ಮುಖ್ಯರಸ್ತೆ ಸಮೀಪದ ಗೋಕುಲ್ ಆರ್ಕೇಡ್‌ನಲ್ಲಿರುವ ಶೃಂಗಾರ್ ಜುವೆಲ್ಲರ್‌ನಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ಚಿನ್ನಾಭರಣಗಳ ಮೇಲೆ ವಿಶೇಷ ಕೊಡುಗೆಗಳನ್ನು ನೀಡಲಾಗಿದೆ. ನಂಬಿಕೆಗೆ ಇನ್ನೊಂದು ಹೆಸರು ಶೃಂಗಾರ್ ಬೆಳ್ತಂಗಡಿಯಲ್ಲಿ ಕಳೆದ 25 ವರ್ಷಗಳಿಂದ ಚಿನ್ನಾಭರಣ ವ್ಯವಹಾರವನ್ನು ನಡೆಸಿಕೊಂಡು ಬರುತ್ತಿರುವ ಶೃಂಗಾ‌ರ್ ಜುವೆಲ್ಲರ್ ಗೆ ಬೆಳ್ತಂಗಡಿ ತಾಲೂಕು ಮಾತ್ರವಲ್ಲದೆ ನೆರೆಯ ತಾಲೂಕುಗಳಿಂದ ಗ್ರಾಹಕರು ಚಿನ್ನಾಭರಣಕೊಳ್ಳಲು ಆಗಮಿಸುತ್ತಿರುವುದು ಇವರ ಚಿನ್ನದ ಗುಣಮಟ್ಟ ಹಾಗೂ ನಗುಮೊಗದ ಉತ್ತಮ ಸೇವೆಗೆ ಸಾಕ್ಷಿಯಾಗಿದೆ.

ವಿಶೇಷ ಕೊಡುಗೆಗಳು: ಅಕ್ಷಯ ತೃತೀಯದ ಪ್ರಯುಕ್ತ ಚಿನ್ನಾಭರಣ ಪ್ರಿಯರಿಗೆ ಶೃಂಗಾ‌ರ್ ಜುವೆಲ್ಲರ್‌ನಲ್ಲಿ ಪ್ರತೀ 1 ಗ್ರಾಂ ಚಿನ್ನಾಭರಣ ಖರೀದಿಯ ಮೇಲೆ 1 ಗ್ರಾಂ ಬೆಳ್ಳಿ ನಾಣ್ಯ ಉಚಿತವಾಗಿ ಪಡೆಯುವ ಅವಕಾಶವಿದೆ. ಎಲ್ಲ ಬೆಳ್ಳಿಯ ಆಭರಣ, ಪೂಜಾ ಸಾಮಗ್ರಿಗಳ ಖರೀದಿ ಮೇಲೆ 1 ಕೆಜಿಗೆ 3000ರೂ. ರಿಯಾಯಿತಿ ಪಡೆಯಬಹುದಾಗಿದೆ. ಗ್ರಾಹಕರು ಯಾವುದೇ ತಮ್ಮ ಹಳೆಯ 916 ಹಾಲ್‌ಮಾರ್ಕ್‌ನ ಚಿನ್ನಾಭರಣಗಳ ವಿನಿಮಯಕ್ಕೆಶೇ.100 ಬೆಲೆಯನ್ನು ಪಡೆಯುವ ಸುವರ್ಣಾವಕಾಶವನ್ನು ಕಲ್ಪಿಸಲಾಗಿದೆ.

ಆಕರ್ಷಕ ವಿನ್ಯಾಸಕ: ಹೊಸ ವಿನ್ಯಾಸದ ಮದುವೆ ಆಭರಣಗಳ ಅಪೂರ್ವ ಸಂಗ್ರಹ, ಆಕರ್ಷಕ ವಿನ್ಯಾಸದ ವಿನೂತನ ಚಿನ್ನ ಬೆಳ್ಳಿಯ ಆಭರಣಗಳು, ಪೂಜಾ ಸಾಮಾಗ್ರಿಗಳು, ಮನಮೋಹಕ ಒಡವೆಗಳು, ಮಕ್ಕಳಿಗೆ ಬೆಳ್ಳಿಯ ಆಭರಣಗಳು, ಉಡುಗೊರೆ ನೀಡಲು ಬೇಕಾದ ಚಿನ್ನ ಲೇಪಿತವಾದ ದೇವರ ಫೋಟೋಗಳು ಮಳಿಗೆಯಲ್ಲಿ ಲಭ್ಯವಿದ್ದು, ಅಕ್ಷಯ ತೃತೀಯದ ಈ ಸಂದರ್ಭದಲ್ಲಿ ಶೃಂಗಾರ್ ಜುವೆಲ್ಲರ್ನನಲ್ಲಿ ಆಯೋಜಿಸಿರುವ ಈ ವಿಶೇಷ ಆಫ‌ರ್ ಸಂದರ್ಭದಲ್ಲಿ ಗ್ರಾಹಕರು ಮಳಿಗೆಗೆ ಭೇಟಿ ನೀಡಿ ತಮ್ಮ ಮನಗೊಪ್ಪುವ ಅತ್ಯಾಕರ್ಷಕ ವಿನ್ಯಾಸದ ಚಿನ್ನಾಭರಣಗಳನ್ನು ಖರೀದಿಸಬಹುದಾಗಿದೆ ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here