
ನಿಡ್ಲೆ: ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮಂಡಳಿ, ಸೇವಾ ಶರಧಿ ಟ್ರಸ್ಟ್, ರಾಷ್ಟ್ರಸೇವಿಕಾ ಸಮಿತಿ ಹಾಗೂ ಪರಿವಾರ ಸಂಘಟನೆಗಳ ಸಹಯೋಗದೊಂದಿಗೆ ಮಕ್ಕಳಿಗೆ ಸಂಸ್ಕಾರ ಶಿಬಿರ ಏ.24ರಿಂದ ಏ.28ರವರೆಗೆ ನಡೆಯಿತು.

ಏ.28ರಂದು ಪುಂಡರಿಕಾಕ್ಷಾ ಅವರ ಮಾರ್ಗದರ್ಶನದಲ್ಲಿ ಮಾತೆಯಿಂದ ದೀಪಪೂಜನಾ ಕಾರ್ಯಕ್ರಮ ನಡೆಯಿತು. ರಾತ್ರಿ 8 ರಿಂದ ಸಭಾ ಕಾರ್ಯಕ್ರಮ ನಡೆದ ನಂತರ ವೈಷ್ಣವಿ ಶಿಶುಮಂದಿರ ಮತ್ತು
ಬಾಲಕೋಕುಲ ಮಕ್ಕಳ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ಎಕ್ಸೆಲ್ ಸಮೂಹ ಸಂಸ್ಥೆಯ ಅಧ್ಯಕ್ಷ ಸುಮಂತ್ ಜೈನ್ ಮಾತನಾಡಿ ಪೂಜೆಯಲ್ಲಿ ಕುಳಿತ ಎಲ್ಲಾ ಮಾತೆಯರಿಗೂ ಶುಭ ಹಾರೈಸಿದರು. ಇಂತಹ ಕಾರ್ಯಕ್ರಮ ಎಲ್ಲೋ ವಿರಳ ತನ್ನ ಮನಸ್ಸಿಗೆ ತುಂಬಾ ಖುಷಿ ಕೊಟ್ಟಿದೆ. ಪ್ರತಿ ದೇವಸ್ಥಾನದಲ್ಲೂ ನಡೆಯಲ್ಲಿ ಎಂದು ಶುಭ ಹಾರೈಸಿದ್ದಾರೆ. ಮತ್ತು ಅವರ ವೈಯುಕ್ತಿಕ ನೆಲೆಯಲ್ಲಿ ವೈಷ್ಣವಿ ವಿಶೇಷ ಮಂದಿರ ಕಾರ್ಯತಡ್ಕಕ್ಕೆ ರೂ. 25,000 ಸಹಾಯಧನವನ್ನು ಮತ್ತು ಮತ್ತು ಶಿಶು ಮಂದಿರ ಮಕ್ಕಳಿಗೆ ಸಮವಸ್ತ್ರವನ್ನು ನೀಡುತ್ತೇನೆಂದು ಘೋಷಿಸಿರುತ್ತಾರೆ.
ವೇದಿಕೆಯಲ್ಲಿ ಶಿಶುಮಂದಿರದ ಅಧ್ಯಕ್ಷ ಉಮೇಶ್ ಕುಡ್ಪಾರ್ ವೈಷ್ಣವಿ, ಉಮಾಮಹೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಆನಂದ ಗೌಡ ಮರಕ್ಕಡ, ಮಾತೃ ಮಂಡಳಿಯ ಅಧ್ಯಕ್ಷೆ ಸಂಧ್ಯಾ ಕುಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜನಾರ್ದನ್ ಕಜೆ ಅತಿಥಿಗಳನ್ನು ಸ್ವಾಗತಿಸಿದರು.