ಉಪ್ಪಾರಪಳಿಕೆ: ಶ್ರೀ ಕೃಷ್ಣ ಭಜನಾ ಮಂದಿರದ ಪುನರ್ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಗ್ರಾಮಭಿವೃದ್ದಿ ಯೋಜನೆ ಮೂಲಕ 1 ಲಕ್ಷ ರೂಪಾಯಿ ಮಂಜೂರಾತಿ ಪತ್ರವನ್ನು ಶ್ರೀ ಕ್ರಷ್ಟ ಭಜನಾ ಮಂದಿರದ ಟ್ರಸ್ಟ್ ಗೆ ಹಸ್ತಾಂತರಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಧರ್ಮಸ್ಥಳ ಯೋಜನಾಧಿಕಾರಿ ಯಶೋಧರರವರು ಮಂಜೂರಾತಿ ಪತ್ರ ಹಸ್ತಾಂತರ ಮಾಡಿ ಹಿಂದೂ ಸಮಾಜವು ಸಂಕಲ್ಪ ಮಾಡಿದ ಈ ಭಜನಾ ಮಂದಿರದಿಂದ ಹಿಂದೂ ಸಮಾಜವು ಒಟ್ಟಾಗಿ ಬಾಳುವಂತಾಗಳಿ ಎಂದು ಶುಭ ಹಾರೈಸಿದರು.
ಟ್ರಸ್ಟ್ ಹಾಗೂ ಎಲ್ಲ್ಲಾ ಸಮಿತಿಗಳ ಪರವಾಗಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರಿಗೆ ಹಾಗೂ ಗ್ರಾಮಭಿವೃದ್ಧಿ ಯೋಜನೆಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು. ಗ್ರಾಮಭಿವೃದ್ಧಿ ಯೋಜನೆಯ ಕೊಕ್ಕಡ ವಲಯ ಮೇಲ್ವಿಚಾರಕರು ಭಾಗೀರಥಿ, ಸೇವಾಪ್ರತಿನಿಧಿ ಉಪ್ಪಾರಪಳಿಕೆ ಒಕ್ಕೂಟ ಅಧ್ಯಕ್ಷ ಕುಶಾಲಪ್ಪ ಗೌಡ ಮರುವಂತಿಲ, ಪದಾಧಿಕಾರಿಗಳು, ಸದಸ್ಯರು, ಟ್ರಸ್ಟ್ ಗೌರವಾಧ್ಯಕ್ಷ ಯೋಗೀಶ್ ಅಲಂಬಿಲ, ಅಧ್ಯಕ್ಷ ಶ್ರೀನಾಥ್ ಬಡೆಕಾಯಿಲ್, ಟ್ರಸ್ಟ್ ಪದಾಧಿಕಾರಿಗಳು, ಪ್ರಾರಂಬೊತ್ಸವ ಸಮಿತಿ ಕಾರ್ಯದರ್ಶಿ ಶಿವಾನಂದ ಸಂಕೇಶ, ಪದಾಧಿಕಾರಿಗಳು ಶ್ರದ್ಧಾ ಗೆಳೆಯರ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.