ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ

0

ಬೆಳ್ತಂಗಡಿ: ವೇಣೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಎ.13ರಿಂದ ಎ.22ರವರೆಗೆ ನಡೆಯಿತು. ಎ. 25ರಂದು ಭದ್ರಕಾಳಿ ದೇವಿಯ ಪ್ರತಿಷ್ಠಾ ಮಹೋತ್ಸವ ಜರಗಲಿದೆ. ಎ. 13ರಂದು ಧ್ವಜಾರೋಹಣ ನಡೆದು ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ವಸಂತಕಟ್ಟೆ ಪೂಜೆ, ಮಹಾಪೂಜೆ, ನಿತ್ಯಬಲಿ ನಡೆಯಿತು.

ಎ.14ರಂದು ಮಧ್ಯಾಹ್ನ ಮಹಾಪೂಜೆ, ಸಂತರ್ಪಣೆ, ರಾತ್ರಿ ವಸಂತ ಕಟ್ಟೆ ಪೂಜೆ, ಮಹಾಪೂಜೆ, ನಿತ್ಯಬಲಿ, ಎ.15ರಂದು ಮಧ್ಯಾಹ್ನ ಮಹಾಪೂಜೆ, ಸಂತರ್ಪಣೆ, ರಾತ್ರಿ ವಸಂತ ಕಟ್ಟೆ ಪೂಜೆ, ಮಹಾಪೂಜೆ, ನಿತ್ಯಬಲಿ, ಎ. 16ರಂದು ಮಧ್ಯಾಹ್ನ ಮಹಾಪೂಜೆ, ಸಂತರ್ಪಣೆ, ಸಂಜೆ ಉತ್ಸವ, ವಸಂತ ಕಟ್ಟೆ ಪೂಜೆ, ಮಹಾಪೂಜೆ, ನಿತ್ಯಬಲಿ ನೆರವೇರಿತು.

ಎ. 17ರಂದು ಮಧ್ಯಾಹ್ನ ಮಹಾಪೂಜೆ, ಸಂತರ್ಪಣೆ, ವಸಂತ ಕಟ್ಟೆ ಪೂಜೆ, ಚಂದ್ರಮಂಡಲ, ಮಹಾಪೂಜೆ, ನಿತ್ಯಬಲಿ, ಎ. 18ರಂದು ಮಧ್ಯಾಹ್ನ ಮಹಾಪೂಜೆ, ಸಂತರ್ಪಣೆ, ವಸಂತಕಟ್ಟೆ ಪೂಜೆ, ಚಂದ್ರಮಂಡಲ, ಮಹಾಪೂಜೆ, ನಿತ್ಯಬಲಿ, ರಾತ್ರಿ ರಕ್ತೇಶ್ವರಿ ದೈವದ ನೇಮ, ಎ. 19ರಂದು ಮಧ್ಯಾಹ್ನ ಮಹಾಪೂಜೆ, ಸಂತರ್ಪಣೆ, ದರ್ಶನ ಬಲಿ, ಚಂದ್ರಮಂಡಲ, ಮಹಾಪೂಜೆ, ನಿತ್ಯಬಲಿ, ಕಲ್ಕುಡ-ಕಲ್ಲುರ್ಟಿ ದೈವಗಳ ನೇಮ, ಎ. 20ರಂದು ಮಧ್ಯಾಹ್ನ: ಮಹಾಪೂಜೆ, ಸಂತರ್ಪಣೆ, ಸವಾರಿ ಬಲಿ, ವಸಂತ ಕಟ್ಟೆಪೂಜೆ, ಶ್ರೀ ಭೂತ ಬಲಿ, ಕವಾಟ ಬಂಧನ, ಎ. 21ರಂದು ಕವಾಟೋದ್ಘಾಟನೆ, ವಿಶೇಷ ಸೇವಾದಿಗಳು (ತುಲಾಭಾರ ಸೇವೆ), ಚೂರ್ಣೋತ್ಸವ, ಸಾರ್ವಜನಿಕ ಅನ್ನ ಸಂತರ್ಪಣೆ, ಕೊಡಮಣಿತ್ತಾಯ ದೈವದ ಗಗ್ಗರ ಸೇವೆ, 9ರಿಂದ ಉತ್ಸವ, ಮಹಾರಥೋತ್ಸವ, ಅವಭೃತ ಸ್ನಾನ ಕಟ್ಟೆಪೂಜೆ, ಸ್ನಾನ, ಧ್ವಜಾವರೋಹಣ, ಎ. 22ರಂದು ಸಂಪ್ರೋಕ್ಷಣೆ, ಅನ್ನ ಸಂತರ್ಪಣೆ, ಮಹಾಮಂತ್ರಾಕ್ಷತೆ, ಅಂಗಣ ಪಂಜುರ್ಲಿ ದೈವದ ನೇಮ ನಡೆಯಿತು. ಮತ್ತು ಎ. 25ರಂದು ಚಂಡಿಕಾಯಾಗ ಪ್ರಾರಂಭ, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here