

ಕೊಕ್ಕಡ: ದೇಶದ ಆಗರ್ಭ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕೇರಳದ ತಿರುವನಂತಪುರದ ಅನಂತ ಪದ್ಮನಾಭ ದೇವಾಲಯದ ಸನ್ನಿಧಿಗೆ ಕೊಕ್ಕಡದ ಅಯ್ಯಪ್ಪ ಮಾಲ ವೃತಧಾರಿಗಳಾದ ಶೇಖರ್ ಕೊಕ್ಕಡ, ದಯಾನೀಶ್ ಕೊಕ್ಕಡ, ಶಶಿ ಕೊಕ್ಕಡ, ರವೀಶ್ ಕೊಕ್ಕಡ, ಸುನೀಶ್ ಕೊಕ್ಕಡ, ಅಶೋಕ ಪೊಯ್ಯೋಳೆ, ರಜನಿಕಾಂತ್ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭ ಅನಂತಪದ್ಮನಾಭ ದೇವಳದ ಪ್ರಧಾನ ಅರ್ಚಕರಾದ ಕೊಕ್ಕಡದ ಸತ್ಯನಾರಾಯಣ (ನಾಗೇಶ) ತೋಡ್ತಿಲ್ಲಾಯ ರನ್ನು ಭೇಟಿಯಾಗಿ ಅವರ ಆಶೀರ್ವಾದವನ್ನು ಪಡೆದರು.