

ನೆಲ್ಯಾಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ಪ್ರಮುಖ ಧಾರ್ಮಿಕ ಶ್ರದ್ದಾ ಕೇಂದ್ರ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಕ್ರೈಸ್ತರ ಪ್ರಮುಖ ಧಾರ್ಮಿಕ ಶ್ರದ್ದಾ ದಿನ ಶುಭ ಶುಕ್ರವಾರ ಗುಡ್ ಫ್ರೈಡೆ ಅನ್ನು ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು.
ಬೆಳಗ್ಗಿನ ಜಾವ ಎಂಟು ಘಂಟೆಗೆ ಆರಂಭವಾದ ಪೂಜಾ ವಿಧಿಗಳಲ್ಲಿ ಸಾವಿರಾರು ಮಂದಿ ನಾಡಿನ ವಿವಿಧ ಕಡೆಗಳಿಂದ ಭಕ್ತರು ಬಾಗವಹಿಸಿ ಪ್ರಾರ್ಥನೆ ಸಲ್ಲಿಸಿದ್ದು ವಿಶೇಷವಾಗಿತ್ತು. ಪೂಜಾ ವಿಧಿಗಳಿಗೆ ಪುಣ್ಯ ಕ್ಷೆತ್ರದ ಫಾ. ಶಾಜಿ ಮಾತ್ಯು ನೇತೃತ್ವ ವಹಿದ್ದರು.
ಎಸ್ ಎಂ ವೈ ಎಂ ಯುವಕರು ಅರ್ಪಿಸಿದ ಪ್ರತ್ಯಕ್ಷ ಶಿಲುಬೆಯ ಹಾದಿ ಭಕ್ತರನ್ನು ಕಣ್ಣೀರ ಕಡಲಿಗೆ ಕರೆದೋಯಿದು ಪ್ರಭು ಕ್ರಿಸ್ತರ ಯಾತನೆಗಳ ನೇರ ಅನುಭವ ಕೊಡುವಂತಿತ್ತು.