

ಬೆಳ್ತಂಗಡಿ: ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ್ ಬೆಳ್ತಂಗಡಿ ವಲಯ 2025- 26ನೇ ಸಾಲಿನ ಪದಾಧಿಕಾರಿಗಳ ಚುನಾವಣೆ ಎ. 13ರಂದು ಬೆಳ್ತಂಗಡಿ ಚರ್ಚ್ ಸಭಾಂಗಣದಲ್ಲಿ ನೆರವೇರಿತು. ಚುನಾವಣಾಧಿಕಾರಿಯಾಗಿ ಆಂದ್ರು ನೊರೊನ್ಹ ಸೆಂಟ್ರಲ್ ಕಮಿಟಿಯ ಮಾಜಿ ಅಧ್ಯಕ್ಷ, ಚುನಾವಣಾ ವೀಕ್ಷಕರಾಗಿ ಅಲ್ಪೊನ್ಸ್ ಫೆರ್ನಾಂಡಿಸ್ ನಿರ್ಕನ್, ಸೆಂಟ್ರಲ್ ಕಮಿಟಿಯ ಮಾಜಿ ಕಾರ್ಯದರ್ಶಿ ನೆರವೇರಿಸಿದರು.
ಸೆಂಟ್ರಲ್ ಕಮಿಟಿಯ ಮಾಜಿ ಅಧ್ಯಕ್ಷ ಎಲ್. ಜೆ. ಫೆರ್ನಾಂಡಿಸ್ ಸಹಕರಿಸಿದರು. ಸೆಂಟ್ರಲ್ ಕಮಿಟಿಯ ಮುಖ್ಯ ಚುನಾವಣಾ ಸಂಚಾಲಕ ಲ್ಯಾಂನ್ಸಿ ಡಿಕುನ್ಹ ನಿರ್ದೇಶನದಲ್ಲಿ ಚುನಾವಣೆ ನೆರವೇರಿತು. ಆಧ್ಯಾತ್ಮಿಕ ನಿರ್ದೇಶಕ ಬೆಳ್ತಂಗಡಿ ಚರ್ಚ್ ನ ವಿಗಾರ್ ವಾರ್ ಸ್ವಾಮಿ ವಾಲ್ಟರ್ ಒಸ್ವಾಲ್ಡ್ ಡಿ ಮೇಲ್ಲೋ ಆಶೀರ್ವಾಚನ ನೀಡಿದರು.
ಚುನಾವಣೆಯ ತರಬೇತಿಯನ್ನು ಎ. 6ರಂದು ಜೆರಾಲ್ಡ್ ಡಿ. ಕೋಸ್ಟ ಮಾಜಿ ಅಧ್ಯಕ್ಷ, ಸ್ಟೇನಿ ಲೋಬೊ ಮಾಜಿ ಅಧ್ಯಕ್ಷ, ರೊಲ್ಪಿ ಡಿ ಕೋಸ್ಟ ಮಾಜಿ ಅಧ್ಯಕ್ಷ, ಎಲ್. ಜೆ. ಫೆರ್ನಾಂಡಿಸ್ ಮಾಜಿ ಅಧ್ಯಕ್ಷ ಹಾಗೂ ಕೇಂದ್ರೀಯ ಸಮಿತಿಯ ಪದಾಧಿಕಾರಿಗಳು ತರಬೇತಿ ನೀಡಿದರು. ಪದಾಧಿಕಾರಿಗಳು, ಆಧ್ಯಾತ್ಮಿಕ ನಿರ್ದೇಶಕ ವಾ. ವಾಲ್ಟರ್ ಒಸ್ವಾಲ್ಡ್ ಡಿ ಮೇಲ್ಲೋ ಉಪಸ್ಥಿತರಿದ್ದರು.