

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಹಾಗೂ ವಾಣಿ ವಿದ್ಯಾ ಸಂಸ್ಥೆಗಳ ನೂತನ ಕಟ್ಟಡ ಹಾಗೂ ಸಭಾ ಭವನದಲೋಕಾರ್ಪಣಾ ಸಮಾರಂಭ ಎ. 20 ರಂದು ಹಳೇಕೋಟೆ ವಾಣಿ ವಿದ್ಯಾ ಸಂಸ್ಥೆ ಗಳ ಆವರಣದಲ್ಲಿ ನಡೆಯಲಿದೆ ಎಂದು ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗೌರವಾಧ್ಯಕ್ಷ ಹೆಚ್. ಪದ್ಮ ಗೌಡ ಬೆಳಾಲು ಹೇಳಿದರು ಅವರು ಎ. 15ರಂದು ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಸುಮಾರು ರೂ. 6 ಕೋಟಿ ವೆಚ್ಚ ದಲ್ಲಿ ನೂತನ ಕಟ್ಟಡ ಮತ್ತು ಸಭಾ ಭವನದ ಕಾಮಗಾರಿಗಳು ಪೂರ್ಣಗೊಂಡಿದ್ದು
ಶೃಂಗೇರಿ ಶಾರದಾ ಪೀಠಾಧೀಶ್ವರ ತತ್ಕರಕಮಲ ಸಂಜಾತರಾದ ಶ್ರೀ ಮಜ್ಜದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮಿಜಿಯವರು ದೀಪ ಪ್ರಜ್ವಲನೆ ಮತ್ತು ಆಶೀರ್ವಚನ ನೀಡುವರು. ಕರ್ನಾಟಕ ಸರಕಾರದ ಉಪ ಮುಖ್ಯಮಂತ್ರಿ ಡಿ. ಕೆ. ಶಿವ ಕುಮಾರ್ ಉದ್ಘಾಟನೆ ಮಾಡಲಿದ್ದಾರೆ.
ಕರ್ನಾಟಕ ಸರಕಾರದ ಕೃಷಿ ಸಚಿವ ಚೆಲುವರಾಯ ಸ್ವಾಮಿ, ಜಿಲ್ಲಾ ಉಸ್ತುವಾರಿ ಮತ್ತು ಅರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮಾಜಿ ಮುಖ್ಯ ಮಂತ್ರಿ ಡಿ.ವಿ. ಸದಾನಂದ ಗೌಡ, ನವದೆಹಲಿ ಸರ್ವೋಚ್ಚ ನ್ಯಾಯಾಲಯ ದ ಸೀನಿಯರ್ ಅಡ್ವೋಕೇಟ್ ಶೇಖರ ಗೌಡ ದೇವಸ, ಸಂಸದ ಬ್ರೆಜೇಶ್ ಚೌಟ, ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯರುಗಳಾದ ಎಸ್. ಎಲ್. ಭೋಜೇ ಗೌಡ, ಪ್ರತಾಪಸಿಂಹ ನಾಯಕ್, ಕಿಶೋರ್ ಕುಮಾರ್ ಬೊಟ್ಯಾಡಿ, ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ವಿಶ್ರಾಂತ ಕುಲಪತಿ ಡಾ. ಕೆ. ಚೆನ್ನಪ್ಪ ಗೌಡ, ಮಾಜಿ ಶಾಸಕ ಸಂಜೀವ ಮಠ0ದೂರು, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಹರೀಶ್ ಕುಮಾರ್, ಜಿಲ್ಲಾ ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಲೋಕಯ್ಯ ಗೌಡ, ಬೆಂಗಳೂರು ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ, ನಾರಾಯಣ ಬೇಗೂರು ಬೆಂಗಳೂರು, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಮೊದಲದವರು ಭಾಗವಹಿಸಲಿದ್ದಾರೆ ಎಂದರು. ಇದೆ ಸಂದರ್ಭದಲ್ಲಿ ಸಮುದಾಯದ ಗುರುಪೀಠ ಶೃಂಗೇರಿ ಗೆ ಹುಂಡಿ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದೇಶದಾ0ದ್ಯ0ತ ಶೃಂಗೇರಿ ಮತ್ತು ಆದಿ ಚುಂಚನಗಿರಿ ಮಠಕ್ಕೆ ಭಕ್ತರು ಇದ್ದು ಗೌರವ ಇದೆ ಆದರೆ ಕೆಲವರು ಟ್ರಸ್ಟ್ ಮೂಲಕ ಅವಮಾನ ಮಾಡಿದ್ದಾರೆ ಇದನ್ನು ಖಂಡಿಸುತ್ತೇವೆ.
ಗುರು ಕಾಣಿಕೆ ಸಮರ್ಪಣೆ ಮಾಡಲಿರುವುದರಿಂದ ಗ್ರಾಮ ಸಮಿತಿಗಳ ಸಭೆ ಕರೆದು ಸಭೆಯ ನಿರ್ಣಯದಂತೆ ಶೃಂಗೇರಿ ಸ್ವಾಮೀಜಿ ಯವರನ್ನು ಕರೆಯಲಾಗಿದೆ.
ಆದಿಚುಂಚನಗಿರಿ ಸ್ವಾಮೀಜಿಯವರನ್ನು ಇಲ್ಲಿಯ ಅನೇಕ ಕಾರ್ಯಕ್ರಮಕ್ಕೆ ಕರೆಯಲಾಗಿದೆ ಮುಂದೇಯೂ ಕಾರ್ಯಕ್ರಮ ಗಳಿಗೆ ಅವರನ್ನು ಕರೆಯಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಪಿ. ಕುಶಾಲಪ್ಪ ಗೌಡ, ಉಪಾಧ್ಯಕ್ಷ ಧರ್ಣಪ್ಪ ಗೌಡ ಬಾನಡ್ಕ, ಕಾರ್ಯದರ್ಶಿ ಗಣೇಶ್ ಗೌಡ, ಕಾರ್ಯಕ್ರಮದ ಸಂಚಾಲಕ ಯುವರಾಜ್ ಅನಾರ್, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಗೌಡ ಸವಣಾಲು, ಜೊತೆ ಕಾರ್ಯದರ್ಶಿ ಶೀನಾಥ್, ನಿರ್ದೇಶಕರುಗಳಾದ ಮಾಧವ ಗೌಡ ಬೆಳ್ತಂಗಡಿ, ದಿನೇಶ್ ಗೌಡ ಕೊಯ್ಯೂರು ಉಷಾದೇವಿ ಉಜಿರೆ,, ವಸಂತ ಗೌಡ ನಡ, ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾ ರಾಮಣ್ಣ ಗೌಡ ಉಪಸ್ಥಿತರಿದ್ದರು.