

ಬೆಳಾಲು: ನಿಂತಿಕಲ್ಲು ಅಂಗನವಾಡಿ ಕೇಂದ್ರದಲ್ಲಿ ಎ. 12ರಂದು ಮಕ್ಕಳಿಗೆ ಬೀಳ್ಕೊಡುವ ಸಮಾರಂಭ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದೊಂದಿಗೆ ಮೂರು ಪುಟಾಣಿಗಳ ಹುಟ್ಟುಹಬ್ಬವನ್ನು ಹಾಗೂ ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ಮಾಡಿ ಬಹುಮಾನವನ್ನು ವಿತರಿಸಲಾಯಿತು.

ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಹೇಮಾವತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಲ್ಲಿಕಾ ಗಣೇಶ್ ಮಂಗಳೂರು, ಆಶಾ ಕಾರ್ಯಕರ್ತೆ ಶೀಲಾವತಿ, ಮಾಜಿ ಅಧ್ಯಕ್ಷೆ ಭವಾನಿ, ಸ್ತ್ರೀಶಕ್ತಿ ಗುಂಪಿನ ಅಧ್ಯಕ್ಷೆ ಜಯಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಕ್ಕಳ ಪೋಷಕರು, ತಾಯಂದಿರು, ಹಳೆ ವಿದ್ಯಾರ್ಥಿಗಳು,ಊರಿನ ಗಣ್ಯರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಭಾರತಿ ಕಾರ್ಯಕ್ರಮ ನಿರೂಪಿಸಿದರು. ಸಹಾಯಕಿಯಾದ ವಿಮಲಾ ಸಹಕರಿಸಿದರು. ಬೀಳ್ಕೊಂಡ ಮಕ್ಕಳ ಪೋಷಕರು ಮತ್ತು ಹುಟ್ಟುಹಬ್ಬ ಆಚರಣೆ ಮಾಡಿದ ಪೋಷಕರು ಅಂಗನವಾಡಿ ಕೇಂದ್ರಕ್ಕೆ ಕೊಡುಗೆಯನ್ನು ನೀಡಿ ಸಹಕರಿಸಿದರು. ಆಶಾ ಕಾರ್ಯಕರ್ತೆ ಶೀಲಾವತಿ ವಂದಿಸಿದರು.