ಸೂಳಬೆಟ್ಟು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವರ್ಷಾವಧಿ ಜಾತ್ರೆ

0

ಅಳದಂಗಡಿ: ಪಿಲ್ಯ ಗ್ರಾಮದ ಸೂಳಬೆಟ್ಟು ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವರ್ಷಾವಧಿ ಜಾತ್ರೆ ಎ. 9ರಿಂದ 13 ರವರೆಗೆ ಸಂತೋಷ್ ಕೇಳ್ಕರ್ ಅವರ ತಂತ್ರವರ್ಯತ್ವದಲ್ಲಿ ಸಂಪನ್ನಗೊಂಡಿತು.
ಎ. 9ರಂದು ಬೆಳಿಗ್ಗೆ ತೋರಣ ಮುಹೂರ್ತ, ನವಕಲಶಪೂರ್ವಕ ಧ್ವಜಾರೋಹಣ, ರಾತ್ರಿ ದೇವರ ಉತ್ಸವ, ನಾದ ಮಾಧುರ್ಯ ಬಳಗದವರಿಂದ ಸಂಗೀತ ಕಾರ್ಯಕ್ರಮ, ಶ್ರೀ ಕೃಷ್ಣ ಕುಣಿತ ಭಜನಾ ಸಂಘದವರಿಂದ ಭಜನಾ ಸತ್ಸಂಗ.

ಎ. 10ರಂದು ಸಂಜೆ ವಸಂತ ಪೂಜೆ, ರಾತ್ರಿ ದರ್ಶನ ಬಲಿ, ಪಲ್ಲಕಿ ಉತ್ಸವ, ಕಟ್ಟೆ ಪೂಜೆ, ಲಲಿತಾ ವಿಷ್ಣು ಮಹಿಳಾ ಭಜನಾ ಸಂಘದವರಿಂದ ಭಜನಾ ಸತ್ಸಂಗ, ನಿಯತಿ ನೃತ್ಯ ನಿಕೇತನದವರಿಂದ ನೃತ್ಯ ರೂಪಕ, ಬಳಿಕ ಪಿಂಗಾರ ಕಲಾವಿದರಿಂದ ಕದಂಬ ನಾಟಕ ಪ್ರದರ್ಶನಗೊಂಡಿತು. ಇದೇ ವೇಳೆ ರಥಬೀದಿಯಲ್ಲಿ ನಿರ್ಮಿಸಲಾದ ಗಾಡ್ಗೀಳ್ ಕಲಾವೇದಿಕೆಯ ಉದ್ಘಾಟನೆ ನಡೆಯಿತು.

ಎ. 11ರಂದು ಬೆಳಿಗ್ಗೆ ಗಣಪತಿ ಅಥರ್ವಶೀರ್ಷ ಅಭಿಷೇಕ, ಗಣಹವನ, ಸಂಜೆ ವಸಂತ ಪೂಜೆ, ರಾತ್ರಿ ಉತ್ಸವ, ಭೂತಬಲಿ, ಕವಾಟ ಬಂಧನ ನೆರವೇರವೇರಿತು.

ಎ. 12 ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಪುರುಷಸೂಕ್ತ ಹವನ, ಬಳಿಕ ರಥ ಕಲಶ, ರಥಾರೋಹಣ, ರಾತ್ರಿ ಅಳದಂಗಡಿ ಅರಮನೆ ಡಾ. ಪದ್ಮಪ್ರಸಾದ ಅಜಿಲರ ಉಪಸ್ಥಿತಿಯಲ್ಲಿ ದೇವರ ಉತ್ಸವ ಬಲಿ, ಪಲ್ಲಕಿ ಉತ್ಸವ, ವಸಂತ ಕಟ್ಟೆಯಲ್ಲಿ ಅಷ್ಟಸೇವೆಗಳು, ಕೊಡಮಣಿತ್ತಾಯ ದೈವದ ನೇಮ, ಮಹಾ ರಥೋತ್ಸವ, ದೈವ-ದೇವರ ಭೇಟಿ ನೆರವೇರಿದವು. ಸಂಜೆ ಹನುಮಗಿರಿ ಮೇಳದವರು ಕೃಷ್ಣಸ್ತು ಭಗವಾನ್ ಸ್ವಯಂ ಎಂಬ ಯಕ್ಷಗಾನ ಬಯಲಾಟ ಪ್ರದರ್ಶಿಸಿದರು.

ಆಡಳಿತ ಮೊಕ್ತೇಸರ ಎನ್. ಸದಾನಂದ ಸಹಸ್ರಬುದ್ಧೆ, ಸಹ ಮೊಕ್ತೇಸರರಾದ ಚಂದ್ರಕಾಂತ ಗೋರೆ, ದಯಾನಂದ ನಾತು, ಗಜಾನನ ನಾತು, ಪ್ರಭಾಕರ ಆಠವಳೆ, ಪದ್ಮನಾಭ ನಾತು, ಪುರುಷೋತ್ತಮ ತಾಮ್ಹನ್‌ಕಾರ್ ಉಪಸ್ಥಿತರಿದ್ದರು. ಬ್ರಹ್ಮವಾಹಕರಾಗಿ ಪ್ರಕಾಶ್ ಹೊಳ್ಳ, ಅರ್ಚಕ ಪ್ರಸನ್ನ ಬರ್ವೆ ಸಹಕರಿಸಿದರು. ಮಂಗಳೂರಿನ ಇಸ್ಕಾನ್‌ನ ಸನಂದನ ದಾಸ್, ಅಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳ್ತೆದಾರ ಶಿವಪ್ರಸಾದ ಅಜಿಲ, ಎನ್.ಎಮ್.ತುಳಪುಳೆ, ರಾಷ್ಟ್ರಮಟ್ಟದ ಶೈಕ್ಷಣಿಕ ತರಬೆತುದಾರ ಮರಾಠೆ ಸತೀಶ್ ಮರಾಠೆ ಮತ್ತಿತರರು ಭೇಟಿ ನೀಡಿದರು.

LEAVE A REPLY

Please enter your comment!
Please enter your name here