ಏ.27:ಬೆಳ್ತಂಗಡಿ ಬಂಟರ ಸಂಘದಿಂದ ತಾಲೂಕು ಮಟ್ಟದ ಕ್ರೀಡೋತ್ಸವ

0

ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘ (ರಿ) ಬೆಳ್ತಂಗಡಿ,ತಾಲೂಕು ಯುವ ಬಂಟರ ಹಾಗೂ ಮಹಿಳಾ ಬಂಟರ ವಿಭಾಗದ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಕ್ರೀಡೋತ್ಸವವು ಏ.27ರಂದು ಗುರುವಾಯನಕೆರೆಯ ಶಕ್ತಿನಗರದ ನವಶಕ್ತಿ ಕ್ರೀಡಾಂಗಣದಲ್ಲಿ ಜರುಗಲಿದೆ.

ಈ ಕ್ರೀಡೋತ್ಸವದಲ್ಲಿ ಪಥ ಸಂಚನವು ವಿಶೇಷ ಆಕರ್ಷಣೆಯಾಗಿದ್ದು, ಬೆಳಿಗ್ಗೆ 9 ಗಂಟೆಗೆ ನವಶಕ್ತಿ ಕ್ರೀಡಾಂಗಣದಲ್ಲಿ 9 ವಲಯಗಳ ಕ್ರೀಡಾಳುಗಳು ಮತ್ತು ಬಂಟ ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಶಿಸ್ತುಬದ್ಧ ಮತ್ತು ಆಕರ್ಶಕವಾಗಿ ಪಥ ಸಂಚಲನ ನಡೆಸಿಕೊಟ್ಟ ತಂಡಗಳಿಗೆ ಹಾಗೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಥ ಸಂಚಲನದಲ್ಲಿ ಪಾಲ್ಗೊಂಡ ವಲಯಗಳಿಗೆ ಬಹುಮಾನ ನೀಡಲಾಗುತ್ತದೆ.

ಕ್ರೀಡೋತ್ಸವದಲ್ಲಿ  6 ವರ್ಷದ ಒಳಗಿನ ಬಾಲಕ / ಬಾಲಕಿಯರಿಗೆ 50ಮೀ ಓಟ, ಚೆಂಡು ಎಸೆತ, ಕಪ್ಪೆ ಜಿಗಿತ, 12 ವರ್ಷದ ಒಳಗಿನ ಬಾಲಕ / ಬಾಲಕಿಯರಿಗೆ 80ಮೀ ಓಟ, ಚೆಂಡು ಎಸೆತ, ಲಿಂಬೆ ಚಮಚ,17 ವರ್ಷದ ಒಳಗಿನ ಬಾಲಕ / ಬಾಲಕಿಯರಿಗೆ  100, 200, 40 ವರ್ಷದ ಒಳಗಿನ ಪುರುಷರು / ಮಹಿಳೆಯರಿಗೆ (18 ರಿಂದ 40 ವರ್ಷ) 100ಮೀ ಓಟ, 200ಮೀ ಓಟ, ಗುಂಡೆಸೆತ, 60 ವರ್ಷದ ಒಳಗಿನ ಪುರುಷರು / ಮಹಿಳೆಯರಿಗೆ (41 ರಿಂದ 60 ವರ್ಷ) 100ಮೀ ಓಟ, 200ಮೀ ವೇಗದ ನಡಿಗೆ, ಗುಂಡೆಸೆತ, 60 ವರ್ಷ ಮೇಲ್ಪಟ್ಟ ಹಿರಿಯರಿಗೆ (ಪುರುಷರು / ಮಹಿಳೆಯರು) : 100ಮೀ ವೇಗದ ನಡಿಗೆ, ಗುಂಡೆಸೆತ, ಪುರುಷರಿಗೆ ವಾಲಿಬಾಲ್ (6+1), ಮಹಿಳೆಯರಿಗೆ ತ್ರೋಬಾಲ್ (9+1), ಹಗ್ಗ ಜಗ್ಗಾಟ (9+2) ಇರುವುದು. 

ವಿಜೇತರಿಗೆ ದೇವು ಪೂಂಜ ಟ್ರೋಫಿಯೊಂದಿಗೆ‌ ನಗದು ಬಹುಮಾನ ನೀಡಲಾಗುತ್ತದೆ ಎಂದು ಬಂಟರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡಗಳು ಏ 24ನೇ ಗುರುವಾರದ ಮುಂಚಿತವಾಗಿ ಹೆಸರು ನೊಂದಾಯಿಸತಕ್ಕದ್ದು. ತಂಡಗಳ ತಳಕು ಪ್ರಕ್ರಿಯೆಯನ್ನು ಏ 25ನೇ ಶುಕ್ರವಾರದಂದು ಸಂಜೆ 5.00 ಗಂಟೆಗೆ ಬಂಟರ ಭವನ ಗುರುವಾಯನಕೆರೆಯಲ್ಲಿ

ನಡೆಸಲಾಗುವುದು. ಈ ಸಂದರ್ಭದಲ್ಲಿ ಪ್ರತೀ ವಲಯದ ತಂಡದ ಒಬ್ಬ ಸದಸ್ಯ ಕಡ್ಡಾಯವಾಗಿ ಹಾಜರಿರತಕ್ಕದ್ದು.

ಈ ಕ್ರೀಡಾಕೂಟದಲ್ಲಿ ಹೆಚ್ಚುವರಿ ಕ್ರೀಡೆಗಳನ್ನು ಆ ಯೋಜಿಸುವ ಮತ್ತು ರದ್ದುಗೊಳಿಸುವ ಅವಕಾಶ ಸಂಘಟಕರದ್ದಾಗಿರುತ್ತದೆ.

ಒಂದು ವಲಯದಿಂದ 2 ತಂಡಗಳ ಹೆಸರು ನೊಂದಾಯಿಸಿ ಒಂದು ತಂಡ ಮಾತ್ರ ಭಾಗವಹಿಸಿದ್ದಲ್ಲಿ ಅಂತಹ ತಂಡಗಳನ್ನು ಅನರ್ಹಗೊಳಿಸಲಾಗುವುದು ಎಂದು ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here