


ಬೆಳ್ತಂಗಡಿ: ಸುಲ್ಕೇರಿ ಗೌಡರ ಯಾನೆ ಒಕ್ಕಲಿಗರ ಸಂಘದ ವಾರ್ಷಿಕ ಸಭೆ ಏ.10ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂಘದ ಗೌರವಾಧ್ಯಕ್ಷ ಗೋವಿಂದ ಗೌಡ ಮಾಡಿದರು. ಈ ಸಂದರ್ಭದಲ್ಲಿ ಸುಲ್ಕೇರಿ ಗೌಡರ ಸಮಿತಿಯ ಅಧ್ಯಕ್ಷ ಸದಾನಂದ ಗೌಡ, ಉಪಾಧ್ಯಕ್ಷ ನಾರಾಯಣ ಗೌಡ, ಕಾರ್ಯದರ್ಶಿ ಜಯಂತಿ, ಕೋಶಾಧಿಕಾರಿ ರಾಮಣ್ಣ ಗೌಡ, ಬೆಳ್ತಂಗಡಿ ಯುವ ವೇದಿಕೆಯ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಸುಲ್ಕೇರಿ ಗ್ರಾಮ ಸಮಿತಿಯ ಯುವ ವೇದಿಕೆಯ ಅಧ್ಯಕ್ಷ ಗಂಗಾಧರ ಗೌಡ, ಕಾರ್ಯದರ್ಶಿ ದೇವದಾಸ್ ಗೌಡ, ಕೋಶಾಧಿಕಾರಿ ಕಾರ್ತಿಕ್ ಗೌಡ, ಉಪಾಧ್ಯಕ್ಷ ಯೋಗೀಶ್ ಗೌಡ ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ವಾಣಿ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಮತ್ತು ಸಭಾಭವನದ ಉದ್ಘಾಟನೆಯ ಆಮಂತ್ರಣ ಪತ್ರಿಕೆಯನ್ನು ಸದಸ್ಯರಿಗೆ ವಿತರಿಸಿದರು.

ಸುಲ್ಕೇರಿ ಗ್ರಾಮ ಸಮಿತಿಯ ಅಧ್ಯಕ್ಷ ಸದಾನಂದ ಗೌಡ ಸ್ವಾಗತಿಸಿ, ಸುಲ್ಕೇರಿ ಗ್ರಾಮ ಸಮಿತಿಯ ಕಾರ್ಯದರ್ಶಿ ದೇವದಾಸ್ ಗೌಡ ಧನ್ಯವಾದವಿತ್ತರು.