

ಶಿಶಿಲ: ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿಯ ವಾರ್ಷಿಕೋತ್ಸವದ ಅಂಗವಾಗಿ ಸತ್ಯನಾರಾಯಣ ಪೂಜೆ ಮತ್ತು ಸಭಾಕಾರ್ಯಕ್ರಮವನ್ನು ಅಡ್ಡ ಹಳ್ಳ ಪುರುಷೋತ್ತಮ ಗೌಡರ ಮನೆಯಲ್ಲಿ ನಡೆಸಲಾಯಿತು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಪ್ರಜ್ವಲನೆ ಮೂಲಕ ವೇದಿಕೆಯಲ್ಲಿದ್ದ ಅತಿಥಿಗಳು ನೆರವೇರಿಸಿದರು.
ವೇದಿಕೆಯ ಅಧ್ಯಕ್ಷತೆಯನ್ನು ಒಕ್ಕಲಿಗ ಗ್ರಾಮ ಸಮಿತಿ ಶಿಶಿಲ ಇದರ ಅಧ್ಯಕ್ಷ ಕುಶಾಲಪ್ಪ ಗೌಡ ಜಿ ಬದ್ರಿಜಾಲು ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಇದರ ಅಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ, ಉದ್ಯಮಿಗಳಾದ ಕಿರಣ್ ಚಂದ್ರ ಪುಷ್ಪಗಿರಿ, ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ಇದರ ಯುವ ವೇದಿಕೆಯ ಅಧ್ಯಕ್ಷರಾದ ಚಂದ್ರಕಾಂತ್ ನಿಡ್ಡಾಜೆ, ಸ್ಪಂದನ ಒಕ್ಕಲಿಗ ಸೇವಾ ಸಮಿತಿಯ ಸುರೇಶ ಕೌಡಂಗೆ, ಸೀತಾರಾಮ್ ಬೆಳಾಲು,ಗ್ರಾಮ ಗೌಡರಾದ ಸೇಸಪ್ಪ ಗೌಡ ಸತ್ತಿಕಲ್ಲು, ಒಕ್ಕಲಿಗ ಮಹಿಳಾ ಸಮಿತಿಯ ಉಮಾವತಿ ಗಣೇಶ್ ಗೌಡ ಕೆಳಗಿನ ಒಟ್ಲ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಒಕ್ಕಲಿಗ ಗ್ರಾಮ ಸಮಿತಿ ಶಿಶಿಲ ಇದರ ಉಪಾಧ್ಯಕ್ಷರಾದ ಕೊರಗಪ್ಪ ಗೌಡ ಪಡ್ಪು, ಪ್ರಧಾನ ಕಾರ್ಯದರ್ಶಿ ಭುವನ್ ಕುಮಾರ್, ಯುವ ವೇದಿಕೆಯ ಅಧ್ಯಕ್ಷ ಪ್ರಮೀತ್ ಗೌಡ ಮಾಂತಾಜೆ, ಕಾರ್ಯದರ್ಶಿ ರಾಕೇಶ್ ಗೌಡ ಪಡ್ಪು, ಮಹಿಳಾ ಸಮಿತಿ ಅಧ್ಯಕ್ಷೆ ಉಮಾವತಿ ಗಣೇಶ್ ಗೌಡ, ಕಾರ್ಯದರ್ಶಿ ಕೋಮಲಕ್ಷಿ ಅಡ್ಡಹಳ್ಳ, ಗ್ರಾಮ ಒತ್ತು ಗೌಡರಾದ ಬಾಬು ಗೌಡ ದೇವಸ ಮತ್ತು ಕೃಷ್ಣಪ್ಪ ಗೌಡ ಮುಚ್ಚಿರಡ್ಕ, ಬೈಲುವಾರು ಸಮಿತಿಯ ಮುಖ್ಯಸ್ಥರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಹಕರಿಸಿದರು.
ಆರ್ಥಿಕ ಸಂಕಷ್ಟದಲ್ಲಿದ್ದು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಶಿಬಾಜೆ ಪೆರ್ಲ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷರಾದ ತಿಮ್ಮಪ್ಪ ಗೌಡ ಇವರಿಗೆ ಮತ್ತು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಬೆಳ್ತಂಗಡಿ ತಾಲೂಕು ಶಿಶಿಲ ಗ್ರಾಮದ ಕಂಡೆಚ್ಚಾರ್ ದಿವಂಗತ ಚೆನ್ನಪ್ಪ ಗೌಡರ ಪತ್ನಿ ಶ್ರೀಮತಿ ಪೂರ್ಣಿಮಾ ಇವರಿಗೆ ಚಿಕಿತ್ಸಾ ಸಹಾಯಾರ್ಥ ಧನಸಹಾಯ. ನೀಡಲಾಯಿತು.
ಶಿಬಾಜೆ ಗ್ರಾಮದ ಒಕ್ಕಲಿಗ ಗೌಡ ಸಮಿತಿ ಯ ಪ್ರಮುಖರಾದ ಅಣ್ಣುಗೌಡ, ನಾರಾಯಣ ಗೌಡ ಪಡoತಾಜೆ, ಲೋಕಯ್ಯ ಗೌಡ ತಬಲಾಜೆ, ನಾರಾಯಣ ಗೌಡ ಹೊಸ ಹೊಕ್ಲು, ವಿನಯಚಂದ್ರ ಟಿ. ವಾಣಿ ಕೋ ಓಪರೆಟಿವ್ ಸೊಸೈಟಿ ಮುಖ್ಯಕಾರ್ಯನಿರ್ವಾಹನಾಧಿಕಾರಿ ಧನಂಜಯ ಗೌಡ ಪೆರ್ಲ ಉಪಸ್ಥಿತರಿದ್ದರು.
ಆಗಮಿಸಿದ ಅತಿಥಿಗಳನ್ನು ಒಕ್ಕಲಿಗ ಗ್ರಾಮ ಸಮಿತಿ ಶಿಶಿಲ ಇದರ ಅಧ್ಯಕ್ಷರಾದ ಕುಶಾಲಪ್ಪ ಗೌಡ ಬದ್ರಿಜಾಲು ಸ್ವಾಗತಿಸಿ ಲಾವಣ್ಯ ಪ್ರಾರ್ಥಿಸಿ ಕಾರ್ಯಕ್ರಮದ ನಿರೂಪಣೆಯನ್ನು ಮತ್ತು ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿಗಳಾದ ಭುವನ್ ಕುಮಾರ್ ನೆರವೇರಿಸಿದರು. ಸುಬ್ರಾಯ ಗೌಡ ಧನ್ಯವಾದವಿತ್ತರು.