

ಧರ್ಮಸ್ಥಳ: ಏ. 11ರಂದು ಗ್ರಾಮ ಪಂಚಾಯತ್ ಧರ್ಮಸ್ಥಳ ಇದರ ನೇತ್ರಾವತಿ ಸಭಾಂಗಣದಲ್ಲಿ ಮಾನ್ವಿ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ (ರಿ.) ಧರ್ಮಸ್ಥಳ ಮತ್ತು ಜಿಲ್ಲಾ ಕೃಷಿ ತರಬೇತಿ ಬೆಳ್ತಂಗಡಿ
ಇದರ ಸಹಯೋಗದಲ್ಲಿ ಕೃಷಿ ಮಾಹಿತಿ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾದ ಪ್ರಭಾಕರ್ ಮಯ್ಯ ಇವರು ಸಾವಯವ ಕೃಷಿಯ ಬಗ್ಗೆ ಕೃಷಿಗೆ ರೋಗಗಳ ನಿಯಂತ್ರಣ ದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕೃಷಿ ಅಧಿಕಾರಿ ಗಣೇಶ್ ಸರ್ ಉಪಸ್ಥಿತರಿದ್ದು, ಕೃಷಿ ಇಲಾಖೆಯ ಸೌಲಭ್ಯದ ಬಗ್ಗೆ ತಿಳಿಸಿದರು.
ಉಜಿರೆ ಕೃಷಿ ಸಖಿ ಭಾಗೀರಥಿಯವರು ಅಣಬೆ ಕೃಷಿ ಬಗ್ಗೆ ತರಬೇತಿ ನೀಡಿದರು. ಕೃಷಿ ಸಖಿ ಸುಚೇತಾರವರು ಸ್ವಾಗತಿಸಿ ಅಚ್ಚು ಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಿದರು.
ಒಕ್ಕೂಟದ ಕಾರ್ಯದರ್ಶಿ ವಿಜಯಲಕ್ಷ್ಮಿ, ಪದಾಧಿಕಾರಿ ಯವರು,ಪಂಚಾಯತ್ ಸಿಬ್ಬಂದಿಗಳಾದ ವಂದನಾ, ಶಿವಾನಂದ ಗ್ರಂಥ ಪಾಲಕಿ ಮಂಜುಳಾ, ಎಮ್.ಬಿ.ಕೆ. ಚಂದ್ರಾವತಿ, ಎಲ್. ಸಿ. ಆರ್. ಪಿ. ವೀಣಾ, ಪಶುಸಖಿ ಯಶೋದ ಉಪಸ್ಥಿತರಿದ್ದು ಸಹಕರಿಸಿದರು. ಗ್ರಾಮದ ಕೃಷಿಕರು ಮತ್ತು ಮಹಿಳೆಯರು ತರಬೇತಿಯ ಪ್ರಯೋಜನ ಪಡೆದುಕೊಂಡರು.