

ಬೆಳಾಲು: ಬೆಳಾಲು ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿ, ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ವತಿಯಿಂದ ಪರಾರಿ ಮನೆಯ ರುಕ್ಮಯ ಗೌಡರ ಪತ್ನಿ ವಸಂತಿ ಇವರು ಕಳೆದ ಕೆಲವು ತಿಂಗಳ ಹಿಂದೆ ಕಾರು ಅಪಘಾತಕ್ಕೆ ಒಳಪಟ್ಟ ಕಾರಣ ಶಸ್ತ್ರಚಿಕಿತ್ಸೆಗೆ ಬೆಳಾಲು ಗ್ರಾಮದ ಗೌಡರ ಯಾನೆ ಒಕ್ಕಲಿಗರು 45,500ರೂ. ಧನ ಸಂಗ್ರಹ ಮಾಡಿ ರುಕ್ಮಯ ಗೌಡ ಪರಾರಿ ಇವರಿಗೆ ಹಸ್ತಾಂತರ ಮಾಡಲಾಯಿತು.
ಗ್ರಾಮ ಸಮಿತಿಯ ಅಧ್ಯಕ್ಷ ಧರ್ಮೇಂದ್ರ ಗೌಡ ಫುಚ್ಚೆಹಿತ್ತಿಲು, ಗೌರವಾಧ್ಯಕ್ಷ ವಿಜಯ ಗೌಡ ಸೌತೆ ಗದ್ದೆ, ಯುವ ವೇದಿಕೆಯ ಅಧ್ಯಕ್ಷ ಸಂಜೀವ ಗೌಡ ಕಾಡಂಡ, ಸದಸ್ಯ ಗಂಗಾಧರ ಗೌಡ ಸುರಳಿ, ಮಹಿಳಾ ವೇದಿಕೆಯ ಅಧ್ಯಕ್ಷೆ ಲತಾ ಕೇಶವ ಗೌಡ, ಗೌರವಾಧ್ಯಕ್ಷೆ ಕನ್ನಿಕಾ ಪದ್ಮಗೌಡ, ಕಾರ್ಯದರ್ಶಿ ಜಯಶ್ರೀ ಕಾಡಂಡ, ಸದಸ್ಯೆ ಪ್ರೇಮ ಉಪಸ್ಥಿತರಿದ್ದರು.
ಬೆಳಾಲು ಗೌಡರ ಯಾನೆ ಒಕ್ಕಲಿಗರು ಕಷ್ಟಗಾಲದಲ್ಲಿ ಇರುವ ಸಜಾತಿ ಬಾಂಧವರಿಗೆ ಕಳೆದ ಹಲವಾರು ವರ್ಷಗಳಿಂದ ಧನಸಹಾಯವನ್ನು ನೀಡಿ ಸಾಂತ್ವಾನ ಮಾಡುತ್ತ ಬಂದಿರುತ್ತಾರೆ. ಇವರೆಲ್ಲರಿಗೂ ಗ್ರಾಮ ಸಮಿತಿಯ ಅಧ್ಯಕ್ಷ ಧರ್ಮೇಂದ್ರ ಗೌಡ ಫುಚ್ಚೆಹಿತ್ತಿಲು ಧನ್ಯವಾದ ನೀಡಿದರು. ಹಾಗೂ ಯುವ ವೇದಿಕೆ ಅಧ್ಯಕ್ಷ ಸಂಜೀವ ಗೌಡ ಕಾಡಂಡ ಸ್ವಾಗತಿಸಿದರು. ಮಹಿಳಾ ವೇದಿಕೆ ಅಧ್ಯಕ್ಷೆ ಲತಾ ಕೇಶವ ಗೌಡ ವಂದಿಸಿದರು.