

ನೆರಿಯ: ಗ್ರಾಮದ ಬಸ್ತಿ ನಿವಾಸಿ ಹರೀಶ್ ಪೂಜಾರಿ (48) ಎ. 11ರಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ
ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮನೆಗೆ ಕರೆ ತಂದಿದ್ದರು. ಕೋಮಾ ಅವಸ್ಥೆಯಲ್ಲಿ ಇದ್ದು ನಿಧನ ಹೊಂದಿದರು.
ಇವರು ಸಭೆ ಸಮಾರಂಭಗಳಿಗೆ ಲಘು ಉಪಹಾರದ ಕ್ಯಾಟ್ರೀಗ್ ಹಾಗೂ ಸುಮಾರು ವರ್ಷದಿಂದ ಎಸ್. ಅರ್. ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಉದ್ಯೋಗಿಯಾಗಿದ್ದರು.
ಪತ್ನಿ ಶೋಭಾ ಮಕ್ಕಳಾದ ಅನ್ವಿತ್, ಅನನ್ಯ, ತಂದೆ ಕೊರಗಪ್ಪ ಪೂಜಾರಿ, ಸಹೋದರರು ರಮೇಶ್, ಶಶಿಧರರವರನ್ನು ಅಗಲಿದ್ದಾರೆ.