

ಬೆಳ್ತಂಗಡಿ: ಇಳಂತಿಲ ಗ್ರಾಮದ ಪೆಲಪ್ಪಾರು ಎಂಬಲ್ಲಿನ ನಿವಾಸಿ ಎಣ್ಣ ಕುಂಬಾರ (51) ಎಂಬವರು ವಿಷ ಸೇವಿಸಿ ಆತ್ಮಹತ್ಯೆಗೈದ ಘಟನೆ ಏ. 8ರಂದು ಸಂಭವಿಸಿದೆ. ಪೆಲಪ್ಪಾರು ವೆಂಕಟರಮಣ ಭಟ್ ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಎಲ್ಯಣ್ಣ ಕುಂಬಾರರವರು ನಸುಕಿನ ವೇಳೆ ಮನೆಯಿಂದ ಹೋದವರು ನಾಪತ್ತೆಯಾಗಿದ್ದರು. ಹುಡುಕಾಡಿದಾಗ ವೆಂಕಟರಮಣ ಭಟ್ ರವರ ರಬ್ಬರ್ ತೋಟದಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರ ಅಣ್ಣನ ಮಗ ಉದಯ ಕುಮಾರ್ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.