ಎಕ್ಸಲೆಂಟ್‌ನಿಂದ ರ‍್ಯಾಂಕ್ ಸಾಧನೆ: 13 ಸ್ಥಾನಗಳನ್ನು ಮಡಿಲಿಗೆಳೆದುಕೊಂಡ ಎಕ್ಸಲೆಂಟ್ ಮೂಡುಬಿದಿರೆ

0

ಬೆಳ್ತಂಗಡಿ: ದ್ವ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ವಿಜ್ಞಾನ ವಿಭಾಗದಲ್ಲಿ ನಾಲ್ಕನೇ ಸ್ಥಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ನಾಲ್ಕನೇ ಸ್ಥಾನದೊಂದಿಗೆ 13 ಸ್ಥಾನಗಳನ್ನು ಬಾಚಿಕೊಳ್ಳುವ ಮೂಲಕ ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು ಉತ್ತಮ ಫಲಿತಾಂಶ ದಾಖಲಿಸಿಕೊಂಡಿದೆ. ಇದರೊಂದಿಗೆ ಮತ್ತೊಮ್ಮೆ ಗುಣಮಟ್ಟದ ಶಿಕ್ಷಣವನ್ನು ಸಾಬೀತುಪಡಿಸಿದೆ.

ಪರೀಕ್ಷೆ ಬರೆದ 953 ವಿದ್ಯಾರ್ಥಿಗಳಲ್ಲಿ 13 ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದ ರ‍್ಯಾಂಕ್ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನಗಳನ್ನು ಪಡೆದಿದ್ದಾರೆ.

ಜೈನ ಕಾಶಿ ಮೂಡುಬಿದಿರೆ ಶಿಕ್ಷಣ ಕಾಶಿಯಾಗಿ ರೂಪುಗೊಂಡಿದ್ದು, ಎಕ್ಸಲೆಂಟ್ ವಿದ್ಯಾ ಸಂಸ್ಥೆ ಕಳೆದ 13 ವರ್ಷಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿದೆ. ದ್ವಿತೀಯ ಪದವಿಪೂರ್ವ ಶಿಕ್ಷಣದಲ್ಲಿ ನಿರಂತರವಾಗಿ ಅತ್ಯುತ್ತಮ ಫಲಿತಾಂಶ ದಾಖಲಿಸುತ್ತಾ ಬಂದಿದೆ.

ವಿಜ್ಞಾನ ವಿಭಾಗದಲ್ಲಿ ಸಂಸ್ಥೆಯ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪುರುಷೋತ್ತಮ ತುಳುಪುಳೆ ಮತ್ತು ಜ್ಯೋತಿ ತುಳುಪುಳೆ ಅವರ ಪುತ್ರ ಪ್ರಮುಖ್ ತುಳುಪುಳೆ ( 596 ) 4ನೇ ಸ್ಥಾನ, ಬೆಳ್ತಂಗಡಿಯ ಡಾ ಗುರುದತ್ ಕಾಮತ್ ಮತ್ತು ಗಾಯತ್ರಿ ಜಿ ಕಾಮತ್ ಅವರ ಪುತ್ರ ರೋಹಿತ್ ಕಾಮತ್ ( 593) 7ನೇ ಸ್ಥಾನ, ಬೆಳ್ತಂಗಡಿಯ ಹರೀಶ್ ಶೆಟ್ಟಿ ಮತ್ತು ಸುಮಿತಾ ಅವರ ಪುತ್ರ ಶಿಶಿರ್ ಹೆಚ್ ಶೆಟ್ಟಿ ( 593) 7ನೇ ಸ್ಥಾನ, ಮಂಗಳೂರಿನ ವಿನೋದ್ ಸೋನ್ಸ್ ಮತ್ತು ಸೌಮ್ಯಾ ಸೋನ್ಸ್ ಅವರ ಪುತ್ರ ಥಿಯಾನ್ ಮಹೇಶ್ ಸೋನ್ಸ್ (593) 7ನೇ ಸ್ಥಾನ, ಕೊಡಗಿನ ವಾಸುದೇವ ಎ ಮತ್ತು ಶ್ರುತಿ ಎಂ ಜೆ ಅವರ ಪುತ್ರ ವರುಣ್ ವಿ (593) 7ನೇ ಸ್ಥಾನ, ಮೂಡುಬಿದಿರೆಯ ಗಣೇಶ್ ಮೊಗೆರಾಯ ಮತ್ತು ಶುಭಾ ಅವರ ಪುತ್ರಿ ಸುಜನಾ ( 591) 9ನೇ ಸ್ಥಾನ, ಮೂಡುಬಿದಿರೆಯ ಪಾಂಡುರಂಗ ಪೈ ಮತ್ತು ಸವಿತಾ ಪೈ ಅವರ ಪುತ್ರಿ ಕೆ ಸುಮಾ ಪೈ (591) 9ನೇ ಸ್ಥಾನ, ಸಕಲೇಶಪುರದ ವಿಶ್ವಾ ಜೆ. ಎಸ್. ಮತ್ತು ಬವಿತಾ ಡಿ. ಎಸ್. ಅವರ ಪುತ್ರ ಧನಾಂಶ್ ವಿ (590) 10ನೇ ಸ್ಥಾನ, ಮಣಿಪುರದ ಲಕ್ಷ್ಮಣ್ ಶರ್ಮಾ ಮತ್ತು ಜುಮಾ ಶರ್ಮಾ ಅವರ ಪುತ್ರ ದಿವ್ಯೇಶ್ ಶರ್ಮಾ (590) 10ನೇ ಸ್ಥಾನ, ಬಳ್ಳಾರಿಯ ಎಡುಲಾ ರಾಘವೇಂದ್ರ ಮತ್ತು ಎಡುಲಾ ನಿರ್ಮಲಾ ಅವರ ಪುತ್ರ ಎಡುಲಾ ಓಂಸಾಯಿ(590) 10ನೇ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಚಿಕ್ಕಮಗಳೂರಿನ ಅರುಣ್ ಕ್ಲೆಮೆಂಟ್ ಗೋಮ್ಸ್ ಮತ್ತು ಸುಹಾನ ಮೆಟಿಲ್ಡಾ ವಾಸ್ ದಂಪತಿಯ ಪುತ್ರ ಅನೂಪ್ ಶಾನ್ ಗೋಮ್ಸ್ (596) ರಾಜ್ಯಕ್ಕೆ ೪ನೇ ಸ್ಥಾನ, ಉಪ್ಪಿನಂಗಡಿಯ ಹರೀಶ್ ಕೆ ಮತ್ತು ಸೀಮಾ ಪೆಜತ್ತಾಯ ಅವರ ಪುತ್ರಿ ಅದಿತಿ ಕೆ (594) 6ನೇ ಸ್ಥಾನ, ಮೂಡುಬಿದಿರೆಯ ಸುಧೀರ್ ಶೆಟ್ಟಿ ಮತ್ತು ಅಶ್ವಿನಿ ಶೆಟ್ಟಿಯ ಪುತ್ರ ಆದಿತ್ಯಶೆಟ್ಟಿ (590) 10ನೇ ಸ್ಥಾನವನ್ನು ಪಡೆದಿದ್ದುಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ.

ಪರೀಕ್ಷೆಗೆ ಹಾಜರಾದ 953 ವಿದ್ಯಾರ್ಥಿಗಳಲ್ಲಿ 595 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಶೆಕಡಾ ನೂರು ಫಲಿತಾಂಶ ದಾಖಲಾಗಿದ್ದು ಸಂಸ್ಥೆಯ 241 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ. ಸಂಸ್ಥೆಯ ಒಟ್ಟು ಫಲಿತಾಂಶ 99.89 ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ವಿದ್ಯಾರ್ಥಿಗಳ ಅತ್ಯುತ್ತಮ ಫಲಿತಾಂಶಕ್ಕೆ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ನಿರ್ದೇಶಕರು, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಉಪನ್ಯಾಸಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ.

LEAVE A REPLY

Please enter your comment!
Please enter your name here