ಗೇರುಕಟ್ಟೆ: ಪರಪ್ಪು ಹಿದಾಯತುಸ್ಸಿಬಿಯಾನ್ ಮದರಸದಲ್ಲಿ ಫತ್ಹೇ ಮುಬಾರಕ್: ಮದರಸ ಪ್ರಾರಂಭೋತ್ಸವ

0

ಗೇರುಕಟ್ಟೆ: ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯ ಅಧೀನದಲ್ಲಿರುವ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ನ ಸೂಚನೆಯಂತೆ ಹಿದಾಯತುಸ್ಸಿಬಿಯಾನ್ ಮದರಸದಲ್ಲಿಂದು ಫತ್ಹೇ ಮುಬಾರಕ್ ಮದರಸ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.

ಖತೀಬ ಮಹಮ್ಮದ್ ಮಿಸ್ಬಾಹಿ ದುವಾ ನೆರವೇರಿಸಿ 1ನೇ ತರಗತಿಗೆ ಖುರ್ ಆನ್ ಅಕ್ಷರ ಬರೆಯಿಸುವ ಮೂಲಕ ವಿದ್ಯಾರ್ಥಿಗಳ ದಾಖಲಾತಿ ಮಾಡಿದರು. ಅಧ್ಯಕ್ಷ ಅಬೂಬಕ್ಕರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಸದರ್ ಮುಅಲ್ಲಿಮ್ ಅಬೂಬಕ್ಕರ್ ಸಿದ್ದೀಕ್ ಮುಈನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕರೀಮ್ ಮುಅಲ್ಲಿಮರಾದ ಹಸೈನಾರ್ ಸಅದಿ, ಝಿಯಾದ್ ಮುಈನಿ, ಇಲ್ಯಾಸ್ ಮದನಿ, ಅಧೀನ ಸಮಿತಿಗಳ ಪದಾಧಿಕಾರಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here