

ಬೆಳ್ತಂಗಡಿ: ಚರ್ಚ್ ಕ್ರಾಸ್ ಬಳಿ ಶ್ರೀ ಸನ್ನಿಧಿ ಕಾಂಪ್ಲೆಕ್ಸ್ ನಲ್ಲಿ ಹೋಲ್ ಸೇಲ್ ಸಿರಾಮಿಕ್ ಏ. 5ರಂದು ಶುಭಾರಂಭಗೊಂಡಿತು. ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚಿನ ಪ್ರಧಾನ ಗುರು ವಾಲ್ಟರ್ ಡಿಮೆಲ್ಲೊ ಆಶೀರ್ವಚನಗೈದು ಶುಭ ಹಾರೈಸಿದರು.

ಬದ್ಯಾರ್ ಸಂತ ರಪಯಲ್ ಚರ್ಚ್ ನ ಧರ್ಮ ಗುರು ಫಾದರ್ ರೋಷನ್ ಕ್ರಾಸ್ತಾ ಉಪಸ್ಥರಿದ್ದರು. ಆಗಮಿಸಿದ ಗಣ್ಯರಿಗೆ ಮಾಲಕರಾದ ಸಂತೋಷ್ ಪಾಯಿಸ್ ಮತ್ತು ರೋಷನ್ ರವರು ಪುಷ್ಪಗುಚ್ಚ ನೀಡಿ ಸ್ವಾಗತಿಸಿದರು.

ಮಾಲಕರಾದ ಸಂತೋಷ್ ಮತ್ತು ಪತ್ನಿ ಅಂಜಲಿ, ಪುತ್ರ ಈಡನ್ ಸನ್ ಇನ್ನೋರ್ವ ಆಡಳಿತ ಪಾಲುದಾರ ರೋಷನ್ ಮಂಗಳೂರು, ಪತ್ನಿ ಹೆಡ್ರಿಂಗ್ ಶಿಪ್ಪಿಂಗ್ ಲೋಜೆಸ್ಟಿಕ್ ಮಾಲಕಿ ಮೇಲಿಟಾ, ಪುತ್ರ ರಿಯನ್ ಉಪಸ್ಥಿತರಿದ್ದು ಸರ್ವರ ಸಹಕಾರ ಕೋರಿದರು. ಇಲ್ಲಿ ಉತ್ತಮ ಗುಣಮಟ್ಟದ ಟೈಲ್ಸ್ ಮತ್ತು ಕೋಮೊಟ್, ವಾಶ್ ಬೇಸಿನ್, ಟ್ಯಾಪ್ ಮುಂತಾದ ಉತ್ಪನ್ನಗಳು ಹೋಲ್ಸೇಲ್ ದರದಲ್ಲಿ ಲಭ್ಯವಿದೆ ಎಂದು ಕಾರ್ಯಕ್ರಮ ನಿರ್ವಾಹಕ ಗ್ಲೆನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.