ಏ.10-14: ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ-ನಡ್ವಾಲ್ ಸಿರಿಜಾತ್ರೆ

0

ಕನ್ಯಾಡಿ: ಉಜಿರೆ ಗ್ರಾಮದ ಕನ್ಯಾಡಿ 1 ತುಳುನಾಡಿನ ಸತ್ಯನಾಪುರದ ‘ಸತ್ಯದ ಸಿರಿಗಳ’ ಮೂಲ ಆಲಡೆಯ ಪುಣ್ಯಕ್ಷೇತ್ರ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ-ನಡ್ವಾಲ್ ಸಿರಿಜಾತ್ರಾ ಮಹೋತ್ಸವ-ಶ್ರೀ ನಾಗದರ್ಶನ, ಆಶ್ಲೇಷಾ ಬಲಿ, ದೈವಗಳ ನೇಮೋತ್ಸವವು ಎ.10ರಿಂದ ಎ.14ರವರೆಗೆ ವಿವಿಧ ಧಾರ್ಮಿಕ ವೈದಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ.

ಎ.10ರಂದು ಬೆಳಿಗ್ಗೆ ಪುಣ್ಯ ನದಿ ನೇತ್ರಾವತಿಯ ಮೈಂದ್ರಣ್ಣಾಯ (ಜಪದ ಗುಂಡಿ) ಗುಂಡಿಯಿಂದ ತೀರ್ಥವನ್ನು ತರುವುದು. ಸ್ವಸ್ತಿ ಪುಣ್ಯಾಹ, ಗಣಯಾಗ ನವಕ ಪ್ರಧಾನ, ಸತ್ಯನಾಪುರ ಅರಮನೆಯಿಂದ ಹೂ-ಹಿಂಗಾರ ತರುವುದು, ಬೆಳಿಗ್ಗೆ 9ಕ್ಕೆ ಹಸಿರುವಾಣಿ ಹೊರೆ ಕಾಣಿಕೆ ಸಮರ್ಪಣೆ, 11ಕ್ಕೆ ಧ್ವಜಾರೋಹಣ, ಶ್ರೀದೇವರ ಬಲಿ, ಮಹಾಪೂಜೆ, ಮಧ್ಯಾಹ್ನ ಪಲ್ಲಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 5.30ರಿಂದ ಗುರಿಪಳ್ಳ ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿಯಿಂದ ಭಕ್ತಿ ಹೆಜ್ಜೆ ಕುಣಿತ ಭಜನೆ, ಕುಣಿತ ಭಜನೆ ಯನ್ನು ನಡ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಿಠಲ ಶೆಟ್ಟಿ ಬೊಲ್ಲೊಟ್ಟು ನೆರವೇರಿಸುವರು. ರಾತ್ರಿ ದೇವರ ಉತ್ಸವ, ದೀಪಾರಾಧನೆ, ಭೂತರಾಜ, ಮಹಿಷಂತಾಯ, ಮೂರ್ತಿಲ್ಲಾಯ ದೈವಗಳ ನೇಮೋತ್ಸವ ಜರಗಲಿರುವುದು.

ಎ.11ರಂದು ಬೆಳಿಗ್ಗೆ ಗಣಹೋಮ, ಶತರುದ್ರಾಭಿಷೇಕ, ಶ್ರೀದೇವರ ಉತ್ಸವ, ನಾಗ ದೇವರ ಸನ್ನಿಧಿಯಲ್ಲಿ ನಾಗತಂಬಿಲ ಸೇವೆ, ಮಧ್ಯಾಹ್ನ ಮಹಾಪೂಜೆ, ಪಲ್ಲಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ,ಭಂಡಾರ ಬರುವುದು, ಕುಮಾರ ದರ್ಶನ,ರಾತ್ರಿ ಶ್ರೀದೇವರ ಉತ್ಸವ, ವಸಂತಕಟ್ಟಿ ಪೂಜೆ, ಶ್ರೀ ಅಬ್ಬಗ ದಾರಗರ ಚೆನ್ನೆಮಣೆ ಆಟ, ಸಾರ್ವಜನಿಕ ಅನ್ನಸಂತರ್ಪಣೆ, ಮೂಲ ಮಹಿಷಂತಾಯ ನೇಮ, ರಕೇಶ್ವರಿ ನೇಮ, ಪ್ರಧಾನ ದೈವ ಸೇಮಕಲ್ಲ ಪಂಜುರ್ಲಿ ನೇಮೋತ್ಸವ, ಕುಮಾರ ಪಂಜುರ್ಲಿ ದೈವದ ಭೇಟಿ ಪ್ರಸಾದ ವಿತರಣೆ, ಸಂಜೆ 5ರಿಂದ ಪಜಿರಡ್ಕ ಶ್ರೀ ಒoಕಾರೇಶ್ವರ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಉಜಿರೆ ಲಕ್ಸ್ಮಿ ಇಂಡಸ್ಟ್ರಿಸ್ ಕನಸಿನ ಮನೆ ಮಾಲಕ ಮೋಹನ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು.ನಾಗೇಶ್ ಕುಮಾರ್, ಲಕ್ಷ್ಮಣ ಗೌಡ, ನೀಲಯ್ಯ ಪೂಜಾರಿ, ಜಯ ಲಕ್ಷ್ಮಿ, ಪ್ರವೀಣ್ ವಿ. ಜೆ. ಶಶಿಕಲಾ ಜೈನ್ ಮೊದಲದವರು ಭಾಗವಹಿಸುವರು. ರಾತ್ರಿ ಪಂಜುರ್ಲಿ ದೈವದ ಭೇಟಿ ಪ್ರಸಾದ ವಿತರಣೆ ಜರಗಲಿರುವುದು.

ಎ.12ರಂದು ಬೆಳಿಗ್ಗೆ ಗಣಹೋಮ, ರುದ್ರಾಭಿಷೇಕ, ಮಹಾಪೂಜೆ, ಶ್ರೀ ನಾಗಬ್ರಹ್ಮರ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಪುಣ್ಯಾಹ, ಸ್ಥಳ ಶುದ್ಧಿ, ಕಲಾತತ್ವ ಹೋಮ, ಸರ್ವಪ್ರಾಯಶ್ಚಿತ್ತ, ವೇದಮೂರ್ತಿ ನಾಗಪಾತ್ರಿ ಶ್ರೀ ಸುಬ್ರಹ್ಮಣ್ಯ ಮಧ್ಯಸ್ಥ ಇವರ ನೇತೃತ್ವದಲ್ಲಿ ಆಶ್ಲೇಷಾ ಬಲಿ-ಶ್ರೀ ನಾಗದರ್ಶನ ಸೇವೆ, ಮಧ್ಯಾಹ್ನ ಶ್ರೀ ದೇವರ ಉತ್ಸವ, ಶ್ರೀ ನಾಗದೇವರ ಮತ್ತು ಶ್ರೀ ಲೋಕನಾಥೇಶ್ವರ ದೇವರ ಭೇಟಿ, ಮಹಾಪೂಜೆ ಪಲ್ಲಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಕೊಲ್ಲಿ ಶ್ರೀ ದುರ್ಗಾದೇವಿ ಭಜನಾ ಮಂಡಳಿ ಮತ್ತು ಗುರಿಪಳ್ಳ ಶ್ರೀ ಗುರುರಾಘವೆಂದ್ರ ಭಜನಾ ಮಂಡಳಿಯಿಂದ ಭಾವ-ಗಾನ-ಕುಣಿತ’, ರಾತ್ರಿ ನಡೆಯಲಿದೆ. ಬಂಗಾಡಿ ಸಿ ಎ ಬ್ಯಾಂಕ್ ಅಧ್ಯಕ್ಷ ಹರೀಶ್ ಮೋರ್ತಾಜೆ ಭಜನಾ ಕಾರ್ಯಕ್ರಮ ಉದ್ಘಾಟಿಸುವರು.

ರಾತ್ರಿ 7ರಿಂದ ಧಾರ್ಮಿಕ ಸಭೆ ನಡೆಯಲಿದ್ದು ಸಭಾಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುರಾಜ್ ಗುರಿಪಳ್ಳ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್, ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ, ನಡ ಗ್ರಾ.ಪಂ. ಅಧ್ಯಕ್ಷೆ ಮಂಜುಳಾ, ಇಂಜಿನಿಯರ್ ರಾಕೇಶ್ ಬಂಗೇರ, ಧಾರ್ಮಿಕ ಪರಿಷತ್ ಸದಸ್ಯರಾದ ಯೋಗೀಶ್ ಕುಮಾರ್, ಮಲ್ಲಿಕಾ ಪಕ್ಕಳ, ಮಂಜುಳಾ, ರಾಕೇಶ್ ಬಂಗೇರ, ಇನ್ನಿತರರು ಭಾಗವಹಿಸುವರು.

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನವೀನ್ ಮರಿಕೆ ಧಾರ್ಮಿಕ ಉಪನ್ಯಾಸವನ್ನು ನೆರವೇರಿಸಲಿರುವರು. ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಾಂಡುರಂಗ ಮರಾಟೆ, ನಡ ಗ್ರಾ.ಪಂ. ಸದಸ್ಯರಾದ ದಿವಾಕರ, ವಿನುತಾ, ಮಮತಾ ಉಪಸ್ಥಿತರಿರುವರು.

ರಾತ್ರಿ 7:30ರಿಂದ ಕುಮಾರ ದರ್ಶನ, ದೇವರ ಉತ್ಸವ, ಕಟ್ಟೆಪೂಜೆ “ವಾರ್ಷಿಕ ನಡ್ವಾಲ್ ಸಿರಿಜಾತ್ರೆ”, ಸಾರ್ವಜನಿಕ ಅನ್ನಸಂತರ್ಪಣೆ. ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ 9ರಿಂದ ಊರ-ಪರವೂರ ಕಲಾವಿದರಿಂದ ಸಾಂಸ್ಕೃತಿಕ ವೈಭವ, ಶ್ರೀ ಸಿದ್ಧಿವಿನಾಯಕ ಕಲಾತಂಡ ಗುರಿಪಳ್ಳ ಅಭಿನಯದ ಕುತೂಹಲಭರಿತ ತುಳು ಹಾಸ್ಯಮಯ ನಾಟಕ “ಕಥೆ ಏರ್
ಬರೆಪೆರ್…? ” ನಡೆಯಲಿದೆ.

ಎ.13ರಂದು ಬೆಳಿಗ್ಗೆ ಗಣಹೋಮ, ರುದ್ರಾಭಿಷೇಕ, ಶ್ರೀ ದೇವರ ಬಲಿ, ಮಹಾಪೂಜೆ ರಾತ್ರಿ ಉಜಿರೆ ಛತ್ರಪತಿ ಶಿವಾಜಿ ಕುಣಿತ ಭಜನಾ ಮಂಡಳಿ ಭಜನೆ, ರಂಗಪೂಜೆ, ಶ್ರೀ ಭೂತ ಬಲಿ, ಶಯನೋತ್ಸವ ಜಗಲಿರುವುದು.

ಎ.14ರಂದು ಬೆಳಿಗ್ಗೆ ಕವಾಟೋದ್ಘಾಟನೆ. ಶ್ರೀ ದೇವರ ಬಲಿ ಗ್ರಾಮ ದೈವ ಪಿಲಿಚಾಮುಂಡಿ ದೈವದ ನೇಮ, ಅವಭ್ರತ ಸ್ನಾನ, ಕಟ್ಟೆಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಧ್ವಜಾವರೋಹಣ, ಮಧ್ಯಾಹ್ನ ಮಹಾಪೂಜೆ, ಪಲ್ಲಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿರುವುದು ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುರಾಜ್ ಗುರಿಪಳ್ಳ ತಿಳಿಸಿದರು.

LEAVE A REPLY

Please enter your comment!
Please enter your name here