ಏ.5: ಕೋವಿಡ್ ನಂತರ ಮಕ್ಕಳಲ್ಲಿ ಕಂಡುಬರುವ ನ್ಯೂನತೆಗಳನ್ನು ಪತ್ತೆಹಚ್ಚಲು ಹಾಗು ಬಗೆಹರಿಸಲು ಬೆಳ್ತಂಗಡಿ ಜ್ಯೋತಿ ಆಸ್ಪತ್ರೆಯಲ್ಲಿ ವಿಶೇಷ ಶಿಬಿರ

0

ಬೆಳ್ತಂಗಡಿ: ಕೋವಿಡ್ ನಂತರ ಮಕ್ಕಳಲ್ಲಿ ಕಂಡುಬರುವ ನ್ಯೂನತೆಗಳನ್ನು ಪತ್ತೆಹಚ್ಚಲು ಹಾಗು ಬಗೆಹರಿಸಲು ವಿಶೇಷ ಶಿಬಿರವನ್ನು ಬೆಳ್ತಂಗಡಿ ಜ್ಯೋತಿ ಆಸ್ಪತ್ರೆಯು ಹಮ್ಮಿಕೊಳ್ಳಲಾಗಿಧೆ. ಈ ಬರುವ ಏ. 5ರಂದು ನಡೆಯಲಿರುವ ಶಿಬಿರದಲ್ಲಿ ಕೋವಿಡ್ ನಂತರ ಮಕ್ಕಳಲ್ಲಿ ಕಂಡುಬರುವ ನ್ಯೂನತೆಗಳಾದ ಕಲಿಕೆಯ ಭಿನ್ನ ಸಾಮರ್ಥ್ಯ, ಮಾತಿನಲ್ಲಿ ಭಿನ್ನ ಸಾಮರ್ಥ್ಯ, ಶ್ರವಣ ಭಿನ್ನ ಸಾಮರ್ಥ್ಯ, ನೆನಪಿನ ಶಕ್ತಿ ಕೊರತೆ, ಹೈಪರ್ ಆಕ್ಟಿವಿಟಿ ಇತ್ಯಾದಿ ಸಮಸ್ಯೆಗಳನ್ನು ಪತ್ತೆಮಾಡಿ ಬಗೆಹರಿಸಲು ಬೇಕಾದ ಮಾಹಿತಿಗಳನ್ನು ಮತ್ತು ತೆರಪಿಗಳು ಬೇಕಾದಲ್ಲಿ ಅದರ ಮಾಹಿತಿಗಳನ್ನು ನೀಡಲಾಗುವುದು. ಈ ಶಿಬಿರವು ಉಚಿತವಾಗಿ ಹಮ್ಮಿಕೊಳ್ಳಲಾಗಿದ್ದು ಇಲ್ಲಿ ಲಭ್ಯವಿರುವ ಸೇವೆಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 1ರ ಒಳಗೆ ತಮ್ಮ ಹೆಸರುಗಳನ್ನು ನೊಂದಾಯಿಸತಕ್ಕದ್ದು.

ಅಧ್ಯಯನದಲ್ಲಿ ಬೇಕಾದ ಗಮನ ಇಲ್ಲದೆ ಅಧ್ಯಯನದ ಸಮಯದಲ್ಲೇ ಮತ್ತಿತರ ಚಟುವಟಿಕೆಗಳಿಗೆ ಮುಂದಾಗುವುದು, ಕಲಿತ ಪಾಠವನ್ನು ಕೂಡಲೇ ಕೇಳಿದ್ದರೂ ಸಹ ತಬ್ಬಿಬಾಗುವುದು, ಚಿನ್ನೆಗಳು ಮತ್ತು ಸಂಖ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುವುದು ಮೊದಲಾದ ಕೊರತೆಗಳು ಮಕ್ಕಳಲ್ಲಿ ಕಂಡುಬಂದಲ್ಲಿ ಅವುಗಳನ್ನು ಬಗೆಹರಿಸಲು ಕೆಲವು ತೇರಪ್ಪಿಗಳ ಮೂಲಕ ಸಾಧ್ಯವಾಗುವಂತವುಗಳು. ಆದರೆ ಮಕ್ಕಳಲ್ಲಿರುವ ಇಂತಹ ಕೊರತೆಗಳನ್ನು ಕಂಡುಹಿಡಿಯುವುದು ತುಂಬಾ ಮುಖ್ಯ. ಮಕ್ಕಳಲ್ಲಿ ಹೆಚ್ಚುತ್ತಿರುವ ಕಳ್ಳತನ ಮತ್ತು ಸಣ್ಣ ವಿಷಯಗಳಲ್ಲೂ ಸಹ ಸುಳ್ಳು ಹೇಳುವುದು ಹೆಚ್ಚಾಗುತ್ತಿದೆ. ಪೋಷಕರು ಹಾಗು ಶಿಕ್ಷಕರು ಮಕ್ಕಳಲ್ಲಿ ಕಂಡುಬರುವ ಇಂತಹ ವರ್ತನ ದೋಷಗಳಿಂದ ತುಂಬಾ ದುಃಖಪಡುವವರಿದ್ದಾರೆ. ಇಂತಹ ಸ್ವಭಾವ ದೋಷಗಳು ಬುದ್ಧಿಮಾತಿನಿಂದ ಬಗೆಹರಿಸಲು ಸುಲಭವಲ್ಲ.

ಬರವಣಿಗೆಯಲ್ಲಿ ಗೊಂದಲ – ಅಂದರೆ ವಾಕ್ಯಗಳನ್ನು ಪೂರ್ಣವಾಗಿ ಬರೆಯಲು ಸಾಧ್ಯವಾಗದಿರುವುದು, ಪದಗಳನ್ನು ಅರ್ಧಂಬರ್ಧವಾಗಿ ಬರೆಯುವುದು, ತುಂಬಾ ಓದಿದರು ಪರೀಕ್ಷೆಯಲ್ಲಿ ಕಡಿಮೆ ಅಂಕೆ ಬರುವುದು ಮತ್ತಿತರ ಇಂತಹ ಸಮಸ್ಯೆಗಳು ಸಹ ಮಕ್ಕಳಲ್ಲಿ ಕಾಣುತ್ತಿವೆ . ಸರಿಯಾದ ರೀತಿಯಲ್ಲಿ ಒಂದು ವಿಷಯ ಕಮ್ಯುನಿಕೇಟ್ ಮಾಡಲಾಗದೆ ತಬ್ಬಿಬಾಗುವುದು, ಮಾತನಾಡಲು ವಿಮುಖತೆ, ಒಂದೆರಡು ಶಬ್ದಗಳಲ್ಲಿ ಸಂಭಾಷಣೆ ಮುಗಿಸುವುದು ಈ ಮೊದಲಾದ ಬಿಹೇವಿಯರ್ ಚೇಂಜಸ್ ಮಕ್ಕಳಲ್ಲಿ ಕಂಡುಬರುತ್ತಿವೆ.

ಮಕ್ಕಳಲ್ಲಿ ಕಂಡು ಬರುವ ಅತಿಯಾದ ಕೋಪ, ಸಿಕ್ಕ ವಸ್ತುಗಳನ್ನು ಹೆಕ್ಕಿ ಎಸೆಯುವುದು, ತಡೆಯಲಾಗದ ಕೋಪ, ಮತ್ತೆ ಕೆಲವೊಮ್ಮೆ ತಡೆಯಲಾಗದ ದುಃಖ ಇವುಗಳು ಸಹ ಮಕ್ಕಳಲ್ಲಿ ಕಂಡುಬರುವ ಕೆಲವು ಸಮಸ್ಯೆಗಳು. ಇಂತಹ ಸಮಸ್ಯೆಗಳಿಗೆ ಹಲವು ಕಾರಣಗಳಿವೆ. ಅತಿಯಾದ ಸ್ಕ್ರೀನ್ ಉಪಯೋಗ ಅಂದರೆ ಟಿ.ವಿ., ಮೊಬೈಲ್ ಮುಂತಾದವುಗಳಲ್ಲಿ ಸಮಯ ಕಳೆಯುವುದು, ಕೇಳಿದ ಕೆಲವು ಹಾಡುಗಳನ್ನು ಮಾತ್ರ ರಿಪೀಟ್ ಮಾಡುತ್ತಾ ಕೇಳುತ್ತಿರುವುದು, ಕೆಲವು ಜಾಹೀರಾತುಗಳ ಮೇಲಿನ ಅತಿಯಾದ ಆಕರ್ಷಣೆ ಅದನ್ನು ಅನುಕರಿಸಲು ಮಕ್ಕಳಲ್ಲಿನ ಅತಿಯಾದ ಆಸಕ್ತಿ ಮೊದಲಾದವುಗಳು ಈ ಪಟ್ಟಿಯಲ್ಲಿ ಸೇರುತ್ತದೆ.
ಇಂತಹ ಸಮಸ್ಯೆಗಳನ್ನು ಸೂಕ್ತ ಸಮಯದಲ್ಲಿ ಪತ್ತೆಹಚ್ಚುವುದು ಮತ್ತು ಬೇಕಾದ ಮುಂಜಾಗ್ರತ ಕ್ರಮಗಳು ಕೈಗೊಳ್ಳುವುದು ಮಕ್ಕಳ ಭವಿಷ್ಯಕ್ಕೆ ಉತ್ತಮವಾಗಿರುತ್ತದೆ. ಈ ನಿಟ್ಟಿನಲ್ಲಿ ಏ. 5ರಂದು ಬೆಳ್ತಂಗಡಿ ಜ್ಯೋತಿ ಆಸ್ಪತ್ರೆಯಲ್ಲಿ ನಡೆಯಲಿರುವ ಮಕ್ಕಳ ಉಚಿತ ಸ್ಕ್ರೀನಿಂಗ್ ಶಿಬಿರ ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವುದು ಶಿಫಾರಸುಮಾಡುವಂತಾಗಿದೆ.

LEAVE A REPLY

Please enter your comment!
Please enter your name here