ಬೆಳಾಲು ಕಾಡಿನಲ್ಲಿದ್ದ ಮಗುವಿನ ತಂದೆ ತಾಯಿ ಪತ್ತೆ – ಅಕ್ರಮ ಸಂಬಂಧದ ಹಿನ್ನಲೆ ಹೆದರಿ ಕಾಡಿಗೆ ಬಿಟ್ಟಿರುವುದಾಗಿ ಹೇಳಿಕೆ – ಒಂದು ವಾರದೊಳಗೆ ಮದುವೆಗೆ ನಿರ್ಧಾರ

0

ಬೆಳಾಲು: ಮಾಯ ಮುಂಡ್ರೊಟ್ಟು ಕಾಡಿನಲ್ಲಿ ಪತ್ತೆಯಾದ ನವಜಾತ ಶಿಶುವಿನ ತಂದೆ ತಾಯಿಯನ್ನು ಪತ್ತೆಹಚ್ಚಲಾಗಿದೆ.‌ ಬೆಳಾಲಿನ ಮಾಯದ ಯುವಕ ರಂಜಿತ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಯುವಕ, ಮತ್ತು ಧರ್ಮಸ್ಥಳ ಗ್ರಾಮದ ಯುವತಿಯ ಎರಡೂ ಮನೆಯವರು ಠಾಣೆಗೆ ಕರೆಸಿ ವಿಚಾರಿಸಿ ಒಂದು ವಾರದೊಳಗೆ ಇಬ್ಬರಿಗೂ ಮದುವೆ ಮಾಡುವುದಾಗಿ ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.

ಬೆಳಾಲು ಗ್ರಾಮದ ಯುವಕ ರಂಜಿತ್ ಮತ್ತು ಧರ್ಮಸ್ಥಳ ಗ್ರಾಮದ ಯುವತಿ ನಡುವೆ ಪ್ರೀತಿ ಏರ್ಪಟ್ಟು ಅಕ್ರಮ ಸಂಬಂಧಕ್ಕೆ ಕಾರಣವಾಗಿತ್ತು. ಹೀಗೆ ಅಕ್ರಮ ಸಂಪರ್ಕದ ಹಿನ್ನಲೆಯಲ್ಲಿ ಹುಡುಗಿ‌ ಗರ್ಭಿಣಿಯಾಗಿದ್ದು ಮಾ. 5ರಂದು ಖಾಸಗಿ ಆಸ್ಪತ್ರೆಯಲ್ಲಿ ಮಗು ಜನಿಸಿದೆ. ಇದಾದ ಬಳಿಕ ಹುಡುಗ ಮತ್ತು ಹುಡುಗಿಯ ನಡುವೆ ವೈ ಮನಸ್ಸು ಏರ್ಪಟ್ಟ ಹಿನ್ನಲೆಯಲ್ಲಿ ಹುಡುಗಿ ಮಗುವನ್ನು ತನ್ನ ಪ್ರಿಯಕರ ರಂಜಿತ್ ನ ಬೆಳಾಲಿನ ಮಾಯದಲ್ಲಿರುವ ಮನೆಯಲ್ಲಿ ಬಿಟ್ಟು ಹೋಗಿದ್ದಾಳೆ. ಇದಾದ ಬಳಿಕ ದಿಕ್ಕು ತೋಚದಾದ ಯುವಕ ಮಗುವನ್ನು ಬೆಳಾಲಿನ ಮಾಯ ಮುಂಡ್ರೊಟ್ಟು ಕಾಡಿನಲ್ಲಿ ಬಿಟ್ಟು, ಯಾರದ್ದಾದರೂ ಕೈಗೆ ಸಿಗುವ ತನಕ ದೂರದಲ್ಲಿ ನಿಂತು ನೋಡಿ ನಂತರ ತೆರಳಿದ್ದು ಎಂಬ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here