

ಉಜಿರೆ: “ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರತರುವ ವೇದಿಕೆ ಬೇಸಿಗೆ ಶಿಬಿರ” ಎಂದು ಬೆಳ್ತಂಗಡಿಯ ಸುದ್ದಿ ಉದಯ ಪತ್ರಿಕೆಯ ಉಪ ಸಂಪಾದಕರಾದ ಸಂತೋಷ್.ಪಿ ಕೋಟ್ಯಾನ್ ಬಳಂಜ ಹೇಳಿದರು.
ಇವರು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಉಜಿರೆ ಇಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದ ಉದ್ಘಾಟಕರಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳು ಕರಕುಶಲ ವಸ್ತುಗಳ ತಯಾರಿ, ಭಜನೆ, ನಾಟಕ ಪೂರ್ವರಂಗ ತಯಾರಿ, ಚಿತ್ರಕಲೆ, ಮುದ್ರಣ ಮಾಧ್ಯಮ, ಕ್ರೀಡೆ, ಅಡುಗೆ, ಸಾಮರ್ಥ್ಯ ವೃದ್ಧಿ ಮುಂತಾದ ಅನೇಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಶ್ರೀ ಮನ್ಮೋಹನ್ ನಾಯಕ್ ಕೆ.ಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ಶಾಂಟಿ ಜಾರ್ಜ್ ನಿರೂಪಿಸಿ, ಮುಖ್ಯೋಪಾಧ್ಯಾಯ ಮನ್ಮೋಹನ್ ನಾಯಕ್ ಕೆ.ಜಿ ಸ್ವಾಗತಿಸಿ, ಶಿಕ್ಷಕಿ ಮಧುರ ವಂದಿಸಿದರು.