ಬಾರ್ಯ ದೇವಸ್ಥಾನದ ಆಡಳಿತ ಟ್ರಸ್ಟ್ ಸಭೆ

0

ಬೆಳ್ತಂಗಡಿ: ತಾಲೂಕು ಬಾರ್ಯ ಗ್ರಾಮದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಟ್ರಸ್ಟ್ ಸಭೆಯು ಅಧ್ಯಕ್ಷ ಭಾಸ್ಕರ ಬಾರ್ಯ ನೇತ್ರತ್ವದಲ್ಲಿ ದೇವಳದ ಪ್ರಾಂಗಣದಲ್ಲಿ ನಡೆಯಿತು.

2025 ಫೆಬ್ರವರಿಯಲ್ಲಿ ಜರಗಿದ ಜಾತ್ರೆಯ ಆಯವ್ಯಯವನ್ನು ಮಂಡಿಸಲಾಯಿತು. ಏ.13ರಂದು ಲೋಕ ಕಲ್ಯಾಣಕ್ಕಾಗಿ ದೇವಾಲಯದಲ್ಲಿ ಶ್ರೀ ವಿಷ್ಣು ಸಹಸ್ರನಾಮ ಹೋಮ ಮತ್ತು ಧಾರ್ಮಿಕ ಸಭೆ ನಡೆಸುವುದೆಂದು ನಿರ್ಧರಿಸಲಾಯಿತು.

ದೇವಳ ಆಡಳಿತ ಟ್ರಸ್ಟ್ ಕಾರ್ಯದರ್ಶಿ ಪ್ರಶಾಂತ್ ಪೈ, ಉಪಾಧ್ಯಕ್ಷ ನಾರಾಯಣ ಗೌಡ ಮೂರುಗೋಳಿ, ಕೋಶಾಧಿಕಾರಿ ಸೇಸಪ್ಪ ಸಾಲಿಯಾನ್, ಪವಿತ್ರಪಾಣಿ ಸೂರ್ಯನಾರಾಯಣ ಕುದ್ದಣ್ಣಾಯ, ಅರ್ಚಕ ಗುರುಪ್ರಸಾದ್ ನೂರಿತ್ತಾಯ ಹಾಗು ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here