

ಬೆಳ್ತಂಗಡಿ: ಉಮರುಲ್ ಫಾರೂಕ್ ಜುಮಾ ಮಸ್ಜಿದ್ ಮತ್ತು ಸಿರಾಜುಲ್ ಹುದಾ ಮದರಸ ಕೇಳ್ತಾಜೆಯಲ್ಲಿ ಈದುಲ್ ಫಿತರ್ ಆಚರಿಸಲಾಯಿತು. ಮುಸ್ಲಿಂರು ದಿನಗಳ ವ್ರತ ಆಚರಿಸಿ ಮಾ. 31ರಂದು ಶಾಂತಿ ಸೌಹಾರ್ಧದ ಸಂಕೇತವಾದ ಈದುಲ್ ಫಿತರ್ ಹಬ್ಬವನ್ನು ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ಬೆಳಿಗ್ಗೆ 8 ಗಂಟೆಗೆ ಸಾಮೂಹಿಕ ನಮಾಝ್, ಖುತುಬಾ ಅನ್ನು ಖತೀಬರಾದ ಅಬೂಸಾಲಿ ಝೈನಿ ನೆರವೇರಿಸಿದರು. ಬಳಿಕ ಸ್ನೇಹದ ಸಂಕೇತವಾಗಿ ಪರಸ್ಪರ ಶುಭಾಶಯವನ್ನು ಹಂಚಿಕೊಳ್ಳಲಾಯಿತು. ಊರ ಹಿರಿಯರು, ಯುವಕರು ಮತ್ತು ಮಕ್ಕಳು ಹೊಸ ಉಡುಪು ಧರಿಸಿ ಮಸೀದಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದರು.