

ಉಜಿರೆ: ಶ್ರೀ ಧ. ಮಂ. ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಮೂರು ದಿನಗಳ ಬೇಸಿಗೆ ಶಿಬಿರಕ್ಕೆ ಎಸ್.ಡಿ.ಎಂ. ಕಲಾ ಕೇಂದ್ರದ ನೃತ್ಯ ಸಂಯೋಜಕ ವಿನ್ಯಾಸ್ ಅವರು ಮಾ.28ರಂದು ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ, “ಸೀಮಿತ ಸಮಯದಲ್ಲಿ ನವೀನ ಹಾಗೂ ಸೃಜನಾತ್ಮಕ ವಿಷಯಗಳನ್ನು ಕಲಿಯಿರಿ” ಎಂದು ವಿದ್ಯಾರ್ಥಿಗಳಿಗೆ ಸೂಚಿಸಿದರು. ಕುಣಿತ ಭಜನೆ ಬಗ್ಗೆ ತಿಳಿಸಿದರು.

ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿ, ಹವ್ಯಾಸಿ ಹಾಡುಗಾರ ಮದನ್ ಅವರು ಹಾಡಿನ ಮೂಲಕ ಮನೋರಂಜನೆ ನೀಡಿ ಮಕ್ಕಳನ್ನು ಹಾಡುಗಾರಿಕೆಯಲ್ಲಿ ತೊಡಗಿಸಿಕೂಂಡರು.
ಎಸ್.ಡಿ.ಎಂ. ಸೆಕೆಂಡರಿ ಶಾಲೆಯ ದೈಹಿಕ ಶಿಕ್ಷಕ ಪರಮೇಶ್ವರ್ ಅವರು ಮನೋರಂಜನಾ ಆಟಗಳನ್ನು ಆಡಿಸಿದರು.

ಶಿಬಿರದಲ್ಲಿ ಬೆಂಕಿ ಇಲ್ಲದೆ ಅಡುಗೆ, ಸ್ಪಾಂಜ್ ಗೊಂಬೆ, ಪೊರಕೆ ಕಡ್ಡಿ ತಯಾರಿಕೆ, ಮಾವಿನ ಎಲೆಗಳ ಬಂಟಿಂಗ್ ತಯಾರಿ, ವಾಲ್ ಹ್ಯಾಂಗಿಂಗ್, ಹೂಕ್ ಹೊಲಿಗೆ, ವಿವಿಧ ರೀತಿಯ ಕೈ ಹೊಲಿಗೆಗಳು, ಕಸೂತಿ ಸಹಿತ ಹಲವು ಸೃಜನಾತ್ಮಕ ಚಟುವಟಿಕೆಗಳು ನಡೆಯಲಿವೆ.
ಕಾರ್ಯಕ್ರಮವನ್ನು 4ನೇ ತರಗತಿಯ ನಿಧಿ ಸ್ವಾಗತಿಸಿ, ಮನಸ್ವಿ, ಸುರಾನಿ, ನಿಷಿಕಾ, ಸ್ಕಂದನಾ ಪ್ರಾರ್ಥಿಸಿ, ಮಾನ್ವಿ ಭಟ್ ನಿರೂಪಿಸಿ, ಚಿರಾಗ್ ವಂದಿಸಿದರು.