

ಬೆಳ್ತಂಗಡಿ: ವೇಣೂರು-ಪೆರ್ಮುಡದ 32ನೇ ವರ್ಷದ ಸೂರ್ಯಚಂದ್ರ ಜೋಡುಕರೆ ಕಂಬಳವು ಮಾ. 30ರಂದು ಉದ್ಘಾಟನೆಗೊಂಡಿದೆ.
32ನೇ ವರ್ಷದ ವೇಣೂರು ಪೆರ್ಮುಡ ಸೂರ್ಯ -ಚಂದ್ರ ಜೋಡುಕರೆ ಕಂಬಳ ಕೂಟವನ್ನು ಗಣೇಶ್ ನಾರಾಯಣ ಪಂಡಿತ ರವರು ಉದ್ಘಾಟಿಸಿ ಶುಭ ಹಾರೈಸಿದರು.

ಕಂಬಳ ಸಮಿತಿಯ ಗೌರವಾಧ್ಯಕ್ಷ ರಕ್ಷಿತ್ ಶಿವರಾಂ, ಅಧ್ಯಕ್ಷ ನಿತೀಶ್ ಕೋಟ್ಯಾನ್, ಕಾರ್ಯಧ್ಯಕ್ಷ ಶೇಖರ್ ಕುಕ್ಕೆಡಿ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ನಗರ ಅಧ್ಯಕ್ಷ ಸತೀಶ್ ಕೆ.ಕಾಶಿಪಟ್ಣ, ಪದ್ಮಾಂಬ ಕ್ಯಾಟರಸನ ಮಾಲಕರಾದ ನಾಗ ಕುಮಾರ್ ಜೈನ್, ಹಾಗೂ ಕಂಬಳ ಸಮಿತಿಯ ಪದಾಧಿಕಾರಿಗಳು ಅಭಿಮಾನಿಗಳು ಉಪಸ್ಥಿತರಿದ್ದರು.

ಕಂಬಳಕ್ಕೆ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು, ತಹಸೀಲ್ದಾರ್ ಪೃಥ್ವಿ ಸಾನಿಕಂ, ವೇಣೂರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಪೀಟರ್ ಆರಾನ್, ಕುಂಡದಬೆಟ್ಟು ಜುಮ್ಮಾ ಮಸೀದಿ ಧರ್ಮಗುರು ಕೆ. ಎಂ. ಹನೀಫ್ ಸಖಾಫಿ, ಕುಂಡದಬೆಟ್ಟು ಸೈಂಟ್ ಜಾನ್ ಪೌಲ್ ಚರ್ಚ್ ಧರ್ಮಗುರು ವಿಕಾರ್ ಜನರಲ್ ಫಾ. ಜೋಸ್ ವಲಿಯ ಪರಂಬಿಲ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದ ರಕ್ಷಿತ್ ಅವರು ಸಭಾಪತಿ ಯು.ಟಿ.ಖಾದರ್ ಫರೀದ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕಾರ್ಮಿಕ ಸಚಿವ ಸಂತೋಷ್ ಲಾಡ್ ಭಾಗವಹಿಸಲಿದ್ದಾರೆ.