ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ದ 65ನೇ ವರ್ಷದ ಶ್ರೀ ರಾಮ ತಾರಕ ಮಂತ್ರ ಸಪ್ತಾಹ: ಜಾತ್ರಾ ಮಹೋತ್ಸವಕ್ಕೆ ಚಾಲನೆ

0

ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ನಿತ್ಯಾನಂದ ನಗರದ ಶ್ರೀರಾಮ ಭಗವಾನ್ ನಿತ್ಯಾನಂದ ದೇವಸ್ಥಾನದಲ್ಲಿ ಮಾ. 30ರಿಂದ ಎ. 6ರವರೆಗೆ ನಡೆಯಲಿರುವ 65ನೇ ವರ್ಷದ ಶ್ರೀ ರಾಮತಾರಕ ಮಂತ್ರ ಸಪ್ತಾಹ, ಪ್ರತಿಷ್ಠಾ ಜಾತ್ರೋತ್ಸವಕ್ಕೆ ಮಾ. 30 ರಂದು ವೈದಿಕ ವಿಧಿ ವಿಧಾನ ಗಳೊಂದಿಗೆ ಜಗದ್ಗುರು
ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸ್ಮರಣೆ ಯೊಂದಿಗೆ ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿಯವರ ನೇತೃತ್ವದಲ್ಲಿ
ಶ್ರೀ ರಾಮ ನಾಮ ಸಪ್ತಾಹ ಅಖಂಡ ನಂದಾ ದೀಪ ಬೆಳಗಿಸಿ ಶ್ರೀ ರಾಮ ಜಯರಾಮ ಜಯ ಜಯ ರಾಮ ಮಂತ್ರದ ಮೂಲಕ ಜಾತ್ರೋತ್ಸವದ ಮೂಲಕ ಚಾಲನೆ ನಡೆಯಿತು.

ಹುಬ್ಬಳ್ಳಿ ಕೇಶಾವಪುರ ಅಧ್ವಯಿತ ಪೀಠದ ಸ್ವಾಮೀಜಿ ದಯಾನಂದ ಬಾರ್ಕುರು, ಶಾಸಕ ಹರೀಶ್ ಪೂಂಜ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ ದ ಕೋಶಾಧಿಕಾರಿ ಪದ್ಮರಾಜ್ ಆರ್. ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷ ನಿವೃತ್ತ ಎಸ್. ಪಿ. ಪೀತಾಂಬಾರ ಹೇರಾಜೆ, ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿಯ ಸಂಚಾಲಕ ಜಯಂತ ಕೋಟ್ಯಾನ್, ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್, ಬಿ. ಭುಜಬಲಿ ಧರ್ಮಸ್ಥಳ, ಸದಾನಂದ ಪೂಜಾರಿ ಉಂಗಿಲ ಬೈಲು, ಮಂಜುನಾಥ ಶೆಟ್ಟಿ ನಿಡಿಗಲ್, ಜಿ. ಪ. ಮಾಜಿ ಸದಸ್ಯೆ ನಮಿತಾ ತೋಟತ್ತಾಡಿ, ಪ್ರಶಾಂತ್ ಪಾರೆಂಕಿ, ರಾಜೇಶ್ ಪೂಜಾರಿ ಮೂಡುಕೋ ಡಿ, ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಸುವರ್ಣ ಕನ್ಯಾಡಿ, ಅಣ್ಣಿ ಪೂಜಾರಿ ಕಾಶಿಬೆಟ್ಟು,, ಚಿದಾನಂದ ಇಡ್ಯಾ, ತಿಮ್ಮಪ್ಪ ಗೌಡ ಬೆಳಾಲು, ಸುಜಾತಾ ಅಣ್ಣಿ ಪೂಜಾರಿ, ವಿನೋದಿನಿ ರಾಮಪ್ಪ, ಜಯಶಂಕರ್ ಎಂ. ಬಿ.,ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಧರ್ಮಸ್ಥಳ ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ಧರ್ಮಸ್ಥಳ, ಕಲ್ಮ0ಜ ಗ್ರಾಮ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ, ಬೆಳಾಲು ಗ್ರಾಮ ಸಮಿತಿ ಅಧ್ಯಕ್ಷ ಜಾರಪ್ಪ ಪೂಜಾರಿ ಬೆಳಾಲು, ಪಿ. , ಸುನೀಲ್ ಕನ್ಯಾಡಿ, ಗುರುದೇವ ಮಠದ ಟ್ರಷ್ಟಿ ತುಕಾರಾಮ ಸಾಲಿಯಾನ್, ರವೀಂದ್ರ ಪೂಜಾರಿ ಆರ್ಲ, ಚಂದಪ್ಪ ಪೂಜಾರಿ ಬಂದಾರು, ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತರು, ಊರವರು, ರಥ ಬೀದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು. ಬೆಳಿಗ್ಗೆ ಶ್ರೀ ನಿತ್ಯಾನಂದ ಸ್ವಾಮಿ, ಶ್ರೀ ಮಹಾಗಣಪತಿ,, ಶ್ರೀ ಮಹಾ ದೇವಿಗೆ ಅಲಂಕಾರ ಪೂಜೆ, ಮಹಾ ಗಣಯಾಗ ಶ್ರೀ ಸಿದ್ದಿ ವಿನಾಯಕ, ಕ್ಷೇತ್ರಪಾಲ ಗಣಪತಿ ದೇವರಿಗೆ ವಿಶೇಷ ಪೂಜೆ ವೆ. ಮು. ಲಕ್ಷ್ಮೀಪತಿ ಗೋಪಾಲಚಾರ್ಯ ಮತ್ತು ಅರ್ಚಕ ವೃಂದದ ನೇತೃತ್ವದಲ್ಲಿ ನಡೆಯಿತು. ಬಳಿಕ ತೋಟತ್ತಾಡಿ ಮತ್ತು ಚಿಬಿದ್ರೆ ಗ್ರಾಮಸ್ಥರ ನೇತೃತ್ವದಲ್ಲಿ ವಿವಿಧ ಭಜನಾ ತಂಡ ಗಳಿಂದ ಭಜನೆ ನಡೆಯಿತು.

LEAVE A REPLY

Please enter your comment!
Please enter your name here