

ಬಳಂಜ: ಗ್ರಾಮ ಪಂಚಾಯತ್ ಇದರ ಪರಿಶಿಷ್ಟ ಜಾತಿ, ಪಂಗಡ ಶ್ರೇಯೋಭಿವೃದ್ಧಿ ನಿಧಿಯಡಿ ಫಲಾನುಭವಿಗಳಿಗೆ ವಿವಿಧ ಸಹಾಯಧನ ಮತ್ತು ಸವಲತ್ತುಗಳನ್ನು ವಿತರಿಸಲಾಯಿತು. ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಶೋಭಾ ವಹಿಸಿದ್ದರು.
ಪಂಚಾಯತ್ ಸದಸ್ಯರುಗಳಾದ ಹೇಮಂತ್, ಬಾಲಕೃಷ್ಣ ಪೂಜಾರಿ, ನಿಜಾಮುದ್ದಿನ್ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಮಾಹಿತಿ ನೀಡಿದರು.