ಪೋಷಕರ ಹಾಗೂ ಶಿಕ್ಷಕರ ಚಿಂತನಾ ಸಭೆ

0

ಮೊಗ್ರು: ಗ್ರಾಮದ ಮುಗೇರಡ್ಕ – ಅಲೆಕ್ಕಿ ಶ್ರೀ ರಾಮ ಸೇವಾ ಟ್ರಸ್ಟ್ ಇದರ ಪೋಷಕರ ಹಾಗೂ ಶಿಕ್ಷಕರ ಚಿಂತನಾ ಸಭೆ ಮಾ. 27ರಂದು ಶಿಶುಮಂದಿರ ವಠಾರದಲ್ಲಿ ಜರುಗಿತು. ಉದಯ ಭಟ್ ಇವರು ಸಭಾಧ್ಯಕ್ಷತೆ ವಹಿಸಿದ್ದರು.

ಅಲೆಕ್ಕಿ ಶ್ರೀರಾಮ ಸೇವಾ ಟ್ರಸ್ಟ್ ಇದರ ಅಧ್ಯಕ್ಷ ರಮೇಶ್ ಎನ್., ಸಂಚಾಲಕ ಅಶೋಕ್ ಎನ್., ಶಿಶುಮಂದಿರದ ಹಿರಿಯ ವಿದ್ಯಾರ್ಥಿಗಳು, ಪೋಷಕರು, ಮಾತಾಜಿಯವರು, ಮಾತೃ ಮಂಡಳಿ ಹಾಗೂ ಜೈ ಶ್ರೀರಾಮ್ ಮಹಿಳಾ ಸಂಘ ಅಲೆಕ್ಕಿ ಮುಗೇರಡ್ಕ ಇದರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಶಿಶುಮಂದಿರದಿಂದ ಮುಂದಿನ ಶೈಕ್ಷಣಿಕ ತರಗತಿಗೆ ತೆರಳುತ್ತಿರುವ ಚಿಣ್ಣರಿಗೆ ನೆನಪಿನ ಕಾಣಿಕೆ ನೀಡಿ, ಮುಂದಿನ ಭವಿಷ್ಯ ಉತ್ತಮವಾಗಿರಲೆಂದು ಹರಸಿ ಹಾರೈಸಿ ಪ್ರೀತಿಯಿಂದ ಬೀಳ್ಕೊಳ್ಳಲಾಯಿತು.

ಪ್ರಸವಕ್ಕಾಗಿ ತೆರಳುತ್ತಿರುವ ಶಿಶು ಮಂದಿರದ ಗೀತಾ ಮಾತಾಜಿ ಮತ್ತು ನವ್ಯ ಮಾತಾಜಿ ಯವರಿಗೆ ಸುಖ ಪ್ರಸವಕ್ಕಾಗಿ ಶುಭಕೋರಿದ ಸಮಿತಿ ಮತ್ತು ಮಾತೆಯರು ಬಾಗಿನ ನೀಡಿ ಹರಸಿದರು.
ಸಭೆಯಲ್ಲಿ ಹೆತ್ತವರ ಮಹತ್ವ ತಿಳಿಸಿ, ಅವರನ್ನು ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಾಯಿತು. ಶಿಶು ಮಂದಿರದ ಅನ್ನದಾಸೋಹದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಹಕರಿಸುತ್ತಿರುವ ದಾನಿಗಳಾದ ಧರ್ಣಪ್ಪ ಗೌಡ ನಿರುoಬುಡ, ಸರಿತಾ ನಿರುoಬುಡ, ಗಿರಿಧರ ಗೌಡ ನಿರುoಬುಡ ಇವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

1ನೇ ತರಗತಿಯ ವಿದ್ಯಾಭ್ಯಾಸಕ್ಕಾಗಿ ತೆರಳುತ್ತಿರುವ ಮಕ್ಕಳ ಪೋಷಕರು ಶಿಶುಮಂದಿರಕ್ಕೆ ಗೋಡ್ರೇಜ್ ನ್ನು ಕೊಡುಗೆಯಾಗಿ ನೀಡಿದರು. 2024-25 ನೇ ಸಾಲಿನ ಮಾತೃ ಮಂಡಳಿಯ ಪದಾಧಿಕಾರಿಗಳು ಶಿಶುಮಂದಿರಕ್ಕೆ ದೀಪವನ್ನು ಉಡುಗೊರೆಯಾಗಿ ನೀಡಿದರು. ನೆರೆದವರೆಲ್ಲರಿಗೂ ಉಪಾಹಾರದೊಂದಿಗೆ ಸಿಹಿ ತಿಂಡಿಯ ವ್ಯವಸ್ಥೆ ಮಾಡಿದರು. ಪುಷ್ಪಲತಾ ಮಾತಾಜಿಯವರು ಸ್ವಾಗತಿಸಿ, ನಿರೂಪಿಸಿದರು.
ಸಮಿತಿಯ ಸದಸ್ಯರಾದ ಭರತೇಶ್ ಪುಣ್ಕೆದಡಿಯವರು ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here