

ಶಿರ್ಲಾಲು: ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಹಕಾರ ಭಾರತಿ ಬೆಂಬಲಿತ ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುಧೀರ್ ಆರ್. ಸುವರ್ಣ, ಉಪಾಧ್ಯಕ್ಷರಾಗಿ ಶೀನಪ್ಪ ಎಂ. ಮಲೆಕ್ಕಿಲ ಅವಿರೋಧವಾಗಿ ಆಯ್ಕೆಯಾದರು. ಮಾ. 28ರಂದು ನಡೆದ ನಿರ್ದೇಶಕರ ಸಭೆಯಲ್ಲಿ ಆಯ್ಕೆ ನಡೆಯಿತು.

ನಿರ್ದೇಶಕರುಗಳಾಗಿ ಆನಂದ ಸಾಲಿಯಾನ್ ಓದಿಮಾರ್, ತಾರಾನಾಥ ಗೌಡ, ಅಶೋಧರ, ರಾಮ ಕಾರಂಬರು, ಶೀಲಾ ಹೆಗ್ಡೆ, ಶಶಿಕಲಾ ಸದಾಶಿವ, ನಾರಾಯಣ ರಾವ್, ಕುಶಾಲಪ್ಪ ಗೌಡ, ಚಿದಾನಂದ ಇಂಚರ, ಅಶೋಕ ಸುವರ್ಣ ಉಪಸ್ಥಿತರಿದ್ದರು. ಚುನಾವಣಾಧಿಕಾರಿಯಾಗಿ ಗೋಪಾಲ ಎನ್. ಜಿ. ಪ್ರಕ್ರಿಯೆ ನಡೆಸಿದರು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಮ್ಮಾಜಿ ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು. ಬೆಳ್ತಂಗಡಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಸದಾನಂದ ಪೂಜಾರಿ ಉಂಗಿಲಬೈಲು, ಕೊರಗಪ್ಪ ಗೌಡ ಚಾರ್ಮಾಡಿ, ಸೀತಾರಾಮ ಬಿ.ಎಸ್., ಮಾಧವ ಶಿರ್ಲಾಲು ಹಾಜರಿದ್ದು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು.