ನಿವೃತ್ತ ಆರೋಗ್ಯ ಸೇವಕರಾದ ಸೆಬಾಷ್ಟಿಯನ್- ತ್ರೇಸಿಯಾ ದಂಪತಿಗಳಿಗೆ ಗೌರವ ಸನ್ಮಾನ

0

ನೆಲ್ಯಾಡಿ: ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯಲ್ಲಿ ದೀರ್ಘಾವಧಿಗೆ ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತರಾದ ನೆಲ್ಯಾಡಿಯ ಸೆಬಾಷ್ಟಿಯನ್ – ತ್ರೇಸಿಯಾ ದಂಪತಿಗಳಿಗೆ ಗೌರವ, ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಹಾನಗಲ್, ಬೆಳಗಾವಿ, ಬಿಜಾಪುರ, ಕಲ್ ಘಟಗಿ, ಹುಬ್ಬಳ್ಳಿ ಮೊದಲಾದ ಸ್ಥಳಗಳಲ್ಲಿ ಸೇವೆಯಲ್ಲಿದ್ದು ರಾಜ್ಯ ಆರೋಗ್ಯ ಮಂತ್ರಾಲಯದ ಪ್ರಧಾನ ಕಛೇರಿಯಿಂದ ನಿವೃತ್ತಿಯನ್ನು ಪಡೆದರು. ಈ ಸಮಾರಂಭ ಅವರ ಅಮೂಲ್ಯ ಸೇವೆಗಾಗಿ ಕೃತಜ್ಞತೆ ಸಲ್ಲಿಸುವ ಮತ್ತು ಅವರ ತ್ಯಾಗವನ್ನು ಗೌರವಿಸುವ ಮಹತ್ವದ ಕ್ಷಣವಾಗಿದೆ.

ಅವರ ಸೇವೆಯು ಹಲವಾರು ಜೀವಗಳಿಗೆ ಬೆಳಕು ತಂದಿದ್ದು, ಸಮುದಾಯದ ಆರೋಗ್ಯವನ್ನು ಸುಧಾರಿಸಲು ಮಾಡಿದ ಅವರ ಪರಿಶ್ರಮವು ಅಪ್ರತಿಮ. ಈ ಸನ್ಮಾನವು ಕೇವಲ ಗೌರವ ಸೂಚನೆಯಷ್ಟೇ ಅಲ್ಲ, ಭವಿಷ್ಯದಲ್ಲಿ ಹೊಸ ತಲೆಮಾರಿಗೆ ಪ್ರೇರಣೆಯಾಗಿ ಕಾರ್ಯನಿರ್ವಹಿಸಲು ಒಂದು ಮಾದರಿಯಾಗಿದೆ.

ಎಂದು ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರ ಮತ್ತು ಆರ್ಲ ಸೆಂಟ್ ಮೇರಿಸ್ ಚರ್ಚ್ ನ ಫಾ. ಶಾಜಿ ಮಾತ್ಯು ತಿಳಿಸಿದರು. ನೆಲ್ಯಾಡಿ ಸೆಂಟ್ ಅಲ್ಫೋನ್ಸ ವಾರ್ಡ್ ನ ಅಧ್ಯಕ್ಷ ಜೋನ್ಸನ್ ಪುಳಿಕಲ್, ಕಾರ್ಯದರ್ಶಿ ಎಲ್ಸಿ ಜೋಸ್ ಕಿಯಕ್ಕೆಲ್, ರೆವ. ಸಿಸ್ಟರ್ ಅಲೀಸ್ ಹಾಗೂ ಇತರೆ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here