

ಕುವೆಟ್ಟು: ಮದ್ದಡ್ಕದಿಂದ ಕೋರ್ಯಾರು ಬದ್ಯಾರು ಸಂಪರ್ಕ ರಸ್ತೆಯ ಬಾವುಟ ಗುಡ್ಡೆಯಿಂದ ಕೊಂಕೊಡಿ ರಸ್ತೆಯಲ್ಲಿ ಮಾ. 26 ರoದು ಸುರಿದು ಮಳೆಗೆ ಎತ್ತರದ ಗುಡ್ಡಗಳಿoದ ರಸ್ತೆಗೆ ಹರಿದು ರಸ್ತೆಯ ಉದ್ದಕ್ಕೂ ಮಳೆ ನೀರು ನಿoತು ಸoಚಾರಕ್ಕೆ ಅಡಚಣೆ ಉಂಟಾಗಿದೆ. ಕಾಂಕ್ರೀಟ್ ಆಗುವ ಸoದರ್ಭದಲ್ಲಿ ಚರಂಡಿಯನ್ನು ನಿರ್ಮಿಸದೆ ಬಿಟ್ಟಿದ್ದು ಸಾರ್ವಜನಿಕರು, ವಾಹನ ಚಾಲಕರು ತೊoದರೆಯನ್ನು ಆನುಭವಿಸುತ್ತಿದ್ದು ಗ್ರಾಮ ಪಂಚಾಯತ್ ಇತ್ತ ಕಡೆ ಗಮನ ಹರಿಸಿ ಸೂಕ್ತ ಚರಂಡಿಯ ವ್ಯವಸ್ಥೆ ಮಾಡಬೇಕಾಗಿದೆ ಎಂದು ಸ್ಥಳೀಯರು ದೂರಿಕೊಳ್ಳುತ್ತಿದ್ದಾರೆ.