

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯ ಸಹಕಾರ ಮಂಡಳಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಕೋಶ, ವಾಣಿಜ್ಯ ಸಂಘ, ಪ್ಲೇಸ್ಮೆಂಟ್ ಸೆಲ್, ಯುವ ರೆಡ್ ಕ್ರಾಸ್ ಘಟಕ ಮತ್ತು ರೋವರ್ -ರೇಂಜರ್ಸ್ ಘಟಕಗಳ ಸಹಯೋಗದಲ್ಲಿ ಮಾ. 25ರಂದು ಕಾಲೇಜಿನಲ್ಲಿ ಸಹಕಾರಿ ಕ್ಷೇತ್ರದಲ್ಲಿರುವ ಉದ್ಯೋಗಾವಕಾಶಗಳು ಹಾಗೂ ಡಿಪ್ಲೋಮೋ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳ ಬಗ್ಗೆ ಯುವಜನರ ಕ್ಲಸ್ಟರ್ ತರಗತಿ ಕಾರ್ಯಗಾರವನ್ನು ಆಯೋಜಿಸಲಾಯಿತು.
ಕಾರ್ಯಗಾರದಲ್ಲಿ ಮಂಗಳೂರಿನ ಸಹಕಾರಿ ಯೂನಿಯನ್ ನ ಕಾರ್ಯನಿರ್ವಹಣಾಧಿಕಾರಿ ಎಸ್. ವಿ. ಹಿರೇಮಠ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಸಹಕಾರಿ ಕ್ಷೇತ್ರದಲ್ಲಿರುವ ವಿವಿಧ ಉದ್ಯೋಗವಕಾಶಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ತರಬೇತಿಯನ್ನು ನೀಡಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಸುರೇಶ್ ವಿ., ಮಂಗಳೂರು ಸಹಕಾರಿ ಯೂನಿಯನ್ ನ ವ್ಯವಸ್ಥಾಪಕ ನಾಗಪ್ರಸಾದ್, ಪ್ಲೇಸ್ಮೆಂಟ್ ಅಧಿಕಾರಿ ಪ್ರೊ. ರಶ್ಮಿ ಹೆಚ್., ಐ.ಕ್ಯೂ.ಎ.ಸಿ ಸಂಚಾಲಕ ಡಾಕ್ಟರ್ ಕುಶಾಲಪ್ಪ ಎಸ್. ಉಪಸ್ಥಿತರಿದ್ದರು.
ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ರೋವರ್ ಸ್ಕೌಟ್ ಲೀಡರ್ ರವಿ ಎಂ. ಎನ್., ಸ್ವಾಗತಿಸಿ, ವಾಣಿಜ್ಯ ಸಂಘ ಸಂಚಾಲಕ ಪ್ರೊ. ನವೀನ ಇವರು ವಂದನಾರ್ಪಣೆ ಮಾಡಿದರು.