

ಉಜಿರೆ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವೆಯೆ ನಮ್ಮ ಉಸಿರು ಎಂಬ ಧ್ಯೆಯ ವಾಕ್ಯವನ್ನು ಇಟ್ಟುಕೊಂಡು ಮುನ್ನುಗುತ್ತಿರುವ ವೀರಕೇಸರಿ ಬೆಳ್ತಂಗಡಿ ತಂಡದ 200ನೇ ಮಹತ್ವಕಾಂಕ್ಷಿ ಯೋಜನೆಯಾದ 8ನೇ ಮನೆಯನ್ನು ಉದಯ ಗುಡಿಗಾರ್ ಇವರಿಗೆ ಕಲ್ಮಂಜ ಗ್ರಾಮದ ಅಂತರ ಬೈಲು ಪಾದೆಮೇಲು ಎಂಬಲ್ಲಿ ನಿರ್ಮಿಸಿದ ಆಸರೆ ಮನೆಯನ್ನು ಗೃಹ ಪ್ರವೇಶದೊಂದಿಗೆ ಲೋಕಾರ್ಪಣೆ ಮಾ. 23 ರಂದು ನಡೆಯಿತು.
ಶ್ರೀ ನಾಗಸಾಧು ತಪೋನಿಥಿ ಬಾಬಾ ಶ್ರೀವಿಠ್ಠಲ್ ಗಿರಿಜಿ ಮಹಾರಾಜ್ ಸ್ವಾಮಿಗಳ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ, ಉಜಿರೆ ಲಕ್ಷ್ಮೀ ಗ್ರೂಪ್ ಕೆ.ಮೋಹನ ಕುಮಾರ್ ಬೆಂಗಳೂರು ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ, ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲ, ರಾಷ್ಟೀಯ ತುಳು ಗುಡಿಗಾರರ ಸಂಘದ ಗೌರವಾಧ್ಯಕ್ಷ ಕೃಷ್ಣಪ್ಪ ಗುಡಿಗಾರ, ಭಾಗವಹಿಸಿದರು.
ತುಮಕೂರು ತೆರಿಗೆ ಸಲಹೆಗಾರ ಕೃಷ್ಣ ಮೂರ್ತಿ, ಸಮಾಜ ಸೇವಕ ಪ್ರಭಾಕರ ಸಿ. ಜಿ. ಉಜಿರೆ ಹಳ್ಳಿ ಮನೆ ಪ್ರವೀಣ್ ಫೆರ್ನಾಂಡಿಸ್, ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಸುವರ್ಣ ಕನ್ಯಾಡಿ, ಶ್ರೀ ರಾಮ ಅರ್ಥ ಮೂವರ್ಸ್ ಸುನೀಲ್ ಕನ್ಯಾಡಿ, ಉದ್ಯಮಿ ರಾಜೇಶ್ ಕೆ. ತ್ರಿಶೂಲ್, ರವೀಂದ್ರ ಗುಡಿಗಾರ, ಹರ್ಷೇಂದ್ರ ಗುಡಿಗಾರ, ವೀರಕೇಸರಿ ಸಂಚಾಲಕ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು. ರಚನಾ ಗುಡಿಗಾರ ಕಾರ್ಯಕ್ರಮ ನಿರೂಪಿಸಿದರು.