


ಬೆಳ್ತಂಗಡಿ: ಬೆಳ್ತಂಗಡಿ ಮೂಲದ ಜಿ. ಕೃಷ್ಣ ಬೆಳ್ತಂಗಡಿ ಇವರ ಸಿನಿಮಾ ಕ್ಷೇತ್ರದಲ್ಲಿನ ಸೇವೆ ಹಾಗೂ ಇತ್ತೀಚಿಗೆ ಬಿಡುಗಡೆ ಆದ ಇವರ ನಿರ್ದೇಶನದ “ಇದು ನಮ್ ಶಾಲೆ” ಚಿತ್ರದ ಕಥೆ ಹಾಗೂ ನಿರೂಪಣೆಗಾಗಿ “ಡಾ. ಲೀಲಾವತಿ ಪ್ರಶಸ್ತಿ” ಯನ್ನು ಬೆಂಗಳೂರಿನ “ರವೀಂದ್ರ ಕಲಾಕ್ಷೇತ್ರದಲ್ಲಿ” ನಡೆದ ಕಾರ್ಯಕ್ರಮದಲ್ಲಿ ಅರ್ಪಿಸಿ, ಗೌರವಿಸಲಾಯಿತು.
ಬೆಂಗಳೂರಿನ ಶ್ರೀ ಗುರು ರಾಘವೇಂದ್ರ ಸೇವಾ ಕಲಾ ಟ್ರಸ್ಟ್ ವತಿಯಿಂದ, ಅರಸೀಕೆರೆ ಉಮೇಶ್ ಹಾಗೂ ರವಿ ಆಚಾರ್ ರವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಿನಿಮಾ, ಧಾರಾವಾಹಿ ಕ್ಷೇತ್ರದ ಪ್ರಮುಖರು ಅತಿಥಿಗಳಾಗಿ ಪಾಲ್ಗೊಂಡಿದ್ದರು.