ಮಾಯ ಮಹದೇವ ದೇವಸ್ಥಾನದಲ್ಲಿ ವಾರ್ಷಿಕ ಪ್ರತಿಷ್ಠಾ ದಿನಾಚರಣೆ, ಜಾತ್ರೋತ್ಸವದ ಲೆಕ್ಕಪತ್ರ ಮಂಡನೆ

0

ಬೆಳಾಲು: ಶ್ರೀ ಮಾಯ ಮಹಾದೇವ ದೇವಸ್ಥಾನದಲ್ಲಿ 10ನೇ ವರ್ಷದ ವಾರ್ಷಿಕ ಪ್ರತಿಷ್ಟಾ ಮಹೋತ್ಸವ ಮಾ. 24ರಂದು ಆಲಂಬಾಡಿ ಪದ್ಮನಾಭಾ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.

ಬೆಳಗ್ಗೆ ಗಣಪತಿ ಹೋಮ ದೇವರಿಗೆ ಕಲಾಶಾಭಿಷೇಕ, ಮಹಾಪೂಜೆ, ತುಲಾಭಾರ ಸೇವೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ಈ ವರ್ಷ ನಡೆದ ವಾರ್ಷಿಕ ಜಾತ್ರೋತ್ಸವದ ಲೆಕ್ಕ ಪತ್ರ ಮಂಡನೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹೆಚ್. ಪದ್ಮ ಗೌಡ ರ ಅಧ್ಯಕ್ಷತೆಯಲ್ಲಿ ನಡೆಯಿತು. ಅವರು ಮಾತನಾಡಿ ಗ್ರಾಮ ದೇವಸ್ಥಾನ ಮಾಯ ಮಹದೇವ ದೇವಸ್ಥಾನದ ಬ್ರಹ್ಮಕಲಶೋತ್ಸವದ ನಂತರ ಊರಿನ ಇತರ ಗ್ರಾಮದ ಇತರ ದೇವಸ್ಥಾನಗಳ ಜೀರ್ಣೋದ್ದಾರ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದೆ.

ಶಾಸಕ ನಿಧಿಯಿಂದ, ದೇವಸ್ಥಾನದ ಜೀರ್ಣೋದ್ದಾರದ ಉಳಿಕೆ ಹಣದಿಂದ ನೂತನ ಸಭಾ ಭವನ ನಿರ್ಮಾಣ ಕಾರ್ಯಪ್ರಾರಂಭ ಮಾಡಲಾಗುವುದು. ಸುಮಾರು 500 ಜನರ ಕಾರ್ಯಕ್ರಮಕ್ಕೆ ಅನುಕೂಲವಾಗುವ ಸಭಾಂಗಣ, ಅನ್ನಛತ್ರ ಒಟ್ಟು ರೂ. 1ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಲಿದ್ದು ಊರವರು ಹೆಚ್ಚಿನ ದೇಣಿಗೆ ನೀಡಿ ಸಹಕಾರ ನೀಡಬೇಕು ಎಂದರು.

ಆನುವಂಶಿಕ ಆಡಳಿತ ಮೊಕ್ತೇಸರ ಮಾಯ ಗುತ್ತು ಪುಷ್ಪದಂತ ಜೈನ್, ಮಾಜಿ ಆಡಳಿತಾಧಿಕಾರಿ ನಾರಾಯಣ ಸುವರ್ಣ, ಬೆಳಾಲು ಗ್ರಾಮ ಪಂಚಾಯತ್ ಸದಸ್ಯ ಮಾಜಿ ಅಧ್ಯಕ್ಷ ದಿನೇಶ್ ಕೊಟ್ಯಾನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ ನಾಯ್ಕ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುರೇಶ್ ಭಟ್ ಪರಂಗಾಜೆ, ದಾಮೋದರ ಗೌಡ ಸುರುಳಿ, ದಯಾನಂದ ಪಿ.ಬೆಳಾಲು, ರಾಜಪ್ಪ ಗೌಡ ಪುಚ್ಚೆಹಿತ್ಲು, ದಿನೇಶ್ ಎಂ. ಕೆ., ವಾರಿಜ ಗುಂಡ್ಯ, ಅರ್ಚಕ ಕೇಶವ ರಾಮಯಾಜಿ ಉಪಸ್ಥಿತರಿದ್ದರು. ದೇವಸ್ಥಾನದ ವ್ಯವಸ್ಥಾಪಕ ಶೇಖರ ಗೌಡ ಕೊಲಿಮಾರು ಸ್ವಾಗತಿಸಿ ಲೆಕ್ಕಪತ್ರ ವಾಚಿಸಿದರು.

ಭಜನಾ ಮಂಡಳಿ, ವರಮಹಾಲಕ್ಷ್ಮಿ ಪೂಜಾ ಸಮಿತಿ, ಮಾಯ ಫ್ರೆಂಡ್ಸ್, ಪದಾಧಿಕಾರಿಗಳು ಸದಸ್ಯರು, ವಿವಿಧ ಉಪ ಸಮಿತಿಯ ಸಂಚಾಲಕರು, ಸದಸ್ಯರು, ಊರವರು ಹಾಜರಿದ್ದರು.

LEAVE A REPLY

Please enter your comment!
Please enter your name here