

ಮಡಂತ್ಯಾರು: ಶ್ರೀ ಕ್ಷೇತ್ರ ಪಾರೆಂಕಿ ಶ್ರೀ ಮಹಿಷಮರ್ದಿನೀ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು. ವ್ಯವಸ್ಥಾಪನ ಸಮಿತಿ ಸದಸ್ಯರಾಗಿ ರಮೇಶ, ಭವಾನಿ, ನಳಿನಿ, ಯಶೋಧರ ಶೆಟ್ಟಿ ಎನ್., ಓಬಯ್ಯ, ಬಿ. ರಾಜಶೇಖರ ಶೆಟ್ಟಿ, ರೂಪೇಶ್ ಆಚಾರ್ಯ ಹಾಗೂ ಅರ್ಚಕರಾಗಿ ಪೇಜಾವರ ಶ್ರೀಧರ್ ರಾವ್ ಆಯ್ಕೆಯಾದರು.