

ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ಟರ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ನಡೆಸುತ್ತಿರುವ ಎಲ್. ಸಿ. ಆರ್ ಇಂಡಿಯನ್ ಪದವಿ ಕಾಲೇಜು ಇಲ್ಲಿನ ಬಿ.ಕಾಂ ವಿಭಾಗದಲ್ಲಿ ಮಾ. 22ರಂದು ಪದವಿ ವಿದ್ಯಾರ್ಥಿಗಳಿಗೆ ವಾಣಿಜ್ಯ ಚಟುವಟಿಕೆಗಳ ಮೂಲಕ ವಾಣಿಜ್ಯ ನಿರ್ವಹಣಾ ತಂತ್ರಗಳ ಬಗೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಾಣಿಜ್ಯ ವಿಭಾಗದ ಪದವಿ ವಿದ್ಯಾರ್ಥಿಗಳ “ಇನ್ನೋವೇಟರ್ಸ್” ತಂಡವು ವಿವಿಧ ವಾಣಿಜ್ಯ ಚಟುವಟಿಕೆಗಳನ್ನು ನಡೆಸಿಕೊಟ್ಟರು.
ಹಲವಾರು ನಿರ್ವಹಣಾ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತ ತಂಡಗಳಿಗೆ ಬಹುಮಾನ ನೀಡಲಾಯಿತು. ಪ್ರಥಮ ಬಿ.ಕಾಂ ವಿಭಾಗದ ವಿದ್ಯಾರ್ಥಿನಿ ಫಾತಿಮತ್ ಸಹ್ಲ ಸ್ವಾಗತಿಸಿ, ದ್ವಿತೀಯ ಬಿ. ಕಾಂ. ವಿದ್ಯಾರ್ಥಿನಿ ಸುಪ್ರಿಯಾ ಕಾರ್ಯಕ್ರಮವನ್ನು ನಿರ್ವಹಿಸಿದರು.
ಸಂಸ್ಥೆಯ ಪ್ರಾಂಶುಪಾಲ ಜೋಸ್ಟಾನ್ ಲೋಬೋ, ಸಂಯೋಜಕ ಯಶವಂತ್ ಜಿ. ನಾಯಕ್, ಪದವಿ ವಿಭಾಗದ ಮುಖ್ಯಸ್ಥೆ ದೀಕ್ಷಿತಾ ಹಾಗೂ ಉಪನ್ಯಾಸಕ ವೃಂದದ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು. ಪ್ರಥಮ ಬಿ. ಕಾಂ. ವಿಭಾಗದ ವಿದ್ಯಾರ್ಥಿನಿ ನವ್ಯ ವಂದಿಸಿದರು.