

ಬೆಳ್ತಂಗಡಿ: ಎಸ್. ಪಿ. ಕ್ವಾಟೇಜ್ ನಲ್ಲಿ ಯಶಸ್ವಿ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಬದ್ರಿಯಾ ಜುಮಾ ಮಸೀದಿ ಇರ್ವತ್ತೂರು ಪದವು ಇಲ್ಲಿ ಗಣನೀಯ ಸೇವೆ ಸಲ್ಲಿಸಿ ದೀನಿ ವಿಧ್ಯಾಭ್ಯಾಸ ಮೂಲಕ ಉತ್ತಮ ರೀತಿಯಲ್ಲಿ ಕಾರ್ಯ ಪ್ರವೃತ್ತರಾದ ಗೌರವಯುತ ಮದ್ರಸ ಅಧ್ಯಾಪಕರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
11 ವರ್ಷಗಳ ಕಾಲ ಸುದೀರ್ಘ ನಿಸ್ವಾರ್ಥ ಸೇವೆ ಹಾಗೂ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ದೀನೀ ಭೋದನೆಗೈದ ಬಹುಮಾನ್ಯ ಖತೀಬರಾದ ಉಮರ್ ಮದನಿ ಹಾಗೂ ಹತ್ತು ವರ್ಷಗಳ ಕಾಲ ಗಣನೀಯ ಸೇವೆ ಗೈದು ಎಲ್ಲರ ಮನ ಗೆದ್ದ ಬಹುಮಾನ್ಯ ರಫೀಕ್ ಮದನಿ 4 ವರುಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಸ್ಥಳೀಯ ಬುರೂಜ್ ಸಂಸ್ಥೆಯ ಸದರ್ ಆದ ಸಿದ್ದೀಕ್ ಸಖಾಫಿ ಇವರಿಗೆ ಅವರ ಅನುಪಸ್ಥಿತಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಮಾಜಿ ಅಧ್ಯಕ್ಷ ಅಬೂಬಕ್ಕರ್ ಟಿ.ಎಸ್.ಎನ್. ಅಧ್ಯಕ್ಷತೆ ವಹಿಸಿದರು. ಮಾಜಿ ಕಾರ್ಯದರ್ಶಿ ಎಸ್. ಅಬ್ದುಲ್ ರಹಿಮಾನ್, ಸ್ಥಳೀಯ ನೇತಾರ ಅಬ್ದುಲ್ ರಹಿಮಾನ್ ಯಾನೆ ಖಲೀಲ್ ಬಾಯ್, ಬದ್ರೀಯಾ ಜುಮಾ ಮಸೀದಿ ಆಡಳಿತ ಕಮಿಟಿ ಸದಸ್ಯ ಹಾಗೂ ಮೂಡುಪಡುಕೋಡಿಯ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಇಬ್ರಾಹಿಂ ಮೇಸ್ತ್ರಿ, ಪೈರೋಝ್ ಬಿ.ಎಸ್.ನಗರ ಉಪಸ್ಥಿತರಿದ್ದರು.
ಬಹಳ ಗೌರವಯುತವಾಗಿ ಶಾಲು ಹೊದಿಸಿ, ಕಿರು ಕಾಣಿಕೆ ನೀಡುವುದರ ಮೂಲಕ ಇಬ್ಬರು ಮಹಾನ್ ವ್ಯಕ್ತಿಗಳನ್ನು ಗೌರವಿಸಲಾಯಿತು. ದುಹಾದೊಂದಿಗೆ ಕಾರ್ಯಕ್ರಮ ಆರಂಭಗೊಂಡು ಸ್ವಲಾತ್ ನೊಂದಿಗೆ ಮುಕ್ತಾಯವಾಯಿತು. ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಕಲಾಬಾಗಿಲುರವರು ಎಲ್ಲರನ್ನೂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.