

ಬೆಳ್ತಂಗಡಿ: ತಾಲೂಕಿನ ತೋಟತ್ತಾಡಿ ಗ್ರಾಮದ ಬೈಲಂಗಡಿ ಅರಮನೆಯಲ್ಲಿ ದೈವಗಳ ವಾರ್ಷಿಕ ನೇಮೋತ್ಸವ ಜರಗಿತು. ಮಾ. 18ರಂದು ರಾತ್ರಿ ಬೈರವ ಮತ್ತು ನೆತ್ತೆರ್ ಮುಗುಳಿ ದೈವದ ನೇಮೋತ್ಸವ ಜರಗಿತು.


ಮಾ. 19ರಂದು ಪುರುಷರಾಯ ದೈವದ ನೇಮೋತ್ಸವ ನಡೆಯಿತು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿ ಊರ & ಪರವೂರ ಭಕ್ತಾದಿಗಳು ಪಾಲ್ಗೊಂಡು ದೈವದ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಿದರು.

ಪ್ರೊ. ಎಸ್ ಪ್ರಭಾಕರ್ & ಧರ್ಮಸ್ಥಳ ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ಬೆಂದ್ರಾಳ ಗೋಪಾಲಕೃಷ್ಣ ಇರ್ವತ್ರಾಯರ ನೇತೃತ್ವದಲ್ಲಿ ನೇಮೋತ್ಸವ ಜರಗಿತು.