ಮಿಯ್ಯಾರು: ಶ್ರೀ ವನದುರ್ಗಾ ಪರಮೇಶ್ವರಿ ದೇವಸ್ಥಾನ ಇದರ ನೂತನ ವ್ಯವಸ್ಥಾಪನ ಸಮಿತಿಯ ವತಿಯಿಂದ ದೇವಸ್ಥಾನದ ಡೆವಲಪ್ಮೆಂಟ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಪತಿ ಹೆಬ್ಬಾರ್ ರವರನ್ನು ಗೌರವಿಸಿ ಅವರ ಆಶೀರ್ವಾದವನ್ನು ಪಡೆದರು. ದೇವಸ್ಥಾನದ ಗೌರವಾಧ್ಯಕ್ಷರಾದ ರಮೇಶ್ ಪ್ರಭು ಇವರನ್ನು ದೇವಸ್ಥಾನದ ಸಮಿತಿಯ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಬೊಮ್ಮನಗೌಡ ಮಠ, ಕಾರ್ಯದರ್ಶಿಯಾದ ಸಂತೋಷ ಕೆ ಸಿ. ಕೋಶಧಿಕಾರಿ ಸಾಜು ಕೆ.ಆರ್. ಉಪಾಧ್ಯಕ್ಷರಾದ ಜನಾರ್ಧನ ಪೂಜಾರಿ, ಉಪ ಕಾರ್ಯದರ್ಶಿಯಾದ ಶುಭನಿತ ಹಾಗೂ ಸಮಿತಿಯ ಸದಸ್ಯರಾದ ಹರಿಣಾಕ್ಷಿ, ನಾರಾಯಣ ನಾಯ್ಕ್, ಸೋಮನಾಥ ಗೌಡ ಮುಳಿಮಜಲು ಉಪಸ್ಥಿತಿರಿದ್ದರು.