ಕಕ್ಯಪದವು: ಎಲ್. ಸಿ. ಆರ್ ವಿದ್ಯಾಸಂಸ್ಥೆಯ ಪದವಿ ವಿಭಾಗದಲ್ಲಿ ಉಚಿತ ಐ.ಬಿ.ಪಿ.ಎಸ್ ಪರೀಕ್ಷಾ ತರಬೇತಿಗೆ ಅಧೀಕೃತ ಚಾಲನೆ

0

ಕಕ್ಯಪದವು: ಎಲ್.ಸಿ.ಆರ್ ವಿದ್ಯಾಸಂಸ್ಥೆ ಕಕ್ಯಪದವು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅವಕಾಶವಂಚಿತರಾಗಬಾರದೆಂಬ ಸದುದ್ದೇಶದಿಂದ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಸಂಸ್ಥಾಪಕ ದಿ.ರೋಹಿನಾಥ ಪಾದೆಯವರ ಕನಸಿನಂತೆ, ಸಂಸ್ಥೆಯನ್ನು ಮುನ್ನಡೆಸುತ್ತಿರುವ ಸಂಚಾಲಕಿ ಬಬಿತಾ ಆರ್. ನಾಥ್ ಹಾಗೂ ಕಾರ್ಯದರ್ಶಿಗಳಾದ ಶಿವಾನಿ.ಆರ್.ನಾಥ್ ಇವರ ಅಭಿಲಾಷೆಯಂತೆ ಇಲ್ಲಿನ ಪದವಿ ವಿಭಾಗದ ಬಿ.ಕಾಂ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಜ್ಞಾನವನ್ನು ಮೂಡಿಸುವ ನಿಟ್ಟಿನಲ್ಲಿ ಹೊಸ ಹೊಸ ಯೋಜನೆ ಮತ್ತು ಯೋಚನೆಯೊಂದಿಗೆ ವಿದ್ಯಾಸಂಸ್ಥೆಯು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಪೂರಕ ಶಿಕ್ಷಣದ ಅನಿವಾರ್ಯತೆಯನ್ನು ಅರಿತು ಪದವಿಯೊಂದಿಗೆ ವಿದ್ಯಾರ್ಥಿಗಳು ತಮ್ಮನ್ನು ಸ್ಪರ್ಧಾತ್ಮಕವಾಗಿ ತೊಡಗಿಸಿಕೊಂಡು ಹೊರಜಗತ್ತಿಗೆ ತೆರೆದುಕೊಳ್ಳಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಇದೀಗ ಐ.ಬಿ.ಪಿ.ಎಸ್ ಬ್ಯಾಂಕಿಂಗ್ ತರಭೇತಿಯನ್ನು ಕಾಲೇಜಿನಲ್ಲಿಯೇ ಉಚಿತವಾಗಿ ನೀಡಬೇಕೆಂದು ಸಂಸ್ಥೆಯ ಆಡಳಿತ ಮಂಡಳಿಯ ಸಹಕಾರದೊಂದಿಗೆ ಉಚಿತ ಐ.ಬಿ.ಪಿ.ಎಸ್ ಬ್ಯಾಂಕಿಂಗ್ ಪರೀಕ್ಷಾ ತರಬೇತಿಗೆ 18ರಂದು ಅಧೀಕೃತವಾಗಿ ಚಾಲನೆಯನ್ನು ನೀಡಿ ತರಭೇತಿಯನ್ನು ಆರಂಭಿಸಲಾಯಿತು.

ಸಂಸ್ಥೆಯ ಪ್ರಾಂಶುಪಾಲ ಜೋಸ್ಟನ್ ಲೋಬೊ, ಸಂಯೋಜಕ ಯಶವಂತ್ ಜಿ. ನಾಯಕ್, ಪದವಿ ವಿಭಾಗದ ಮುಖ್ಯಸ್ಥೆ ದೀಕ್ಷಿತಾ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ವಿಂದ್ಯಾಶ್ರೀ , ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಅಧೀಕೃತವಾಗಿ ಚಾಲನೆಯನ್ನು ನೀಡುವ ಮೂಲಕ ಯಶಸ್ವಿಯಾಗಿ ನೆರವೇರಿತು .

ಪದವಿ ವಿಭಾಗದ ಉಪನ್ಯಾಸಕಿ ಗೀತಾ ಡಿ ಹಾಗೂ ರೂಪಾಕ್ಷಿ ಇವರು ಐ.ಬಿ.ಪಿ.ಎಸ್ ತರಭೇತಿ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

LEAVE A REPLY

Please enter your comment!
Please enter your name here